ನವದೆಹಲಿ, ನ 24: ಭಾರತೀಯ ನಾಗರಿಕತೆ, ಸಂಸ್ಕೃತಿ, ಭಾಷೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ವಿವಿಧತೆಯಲ್ಲಿ ಏಕತೆ ಸಂದೇಶ ರವಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವಾಸಿಗಳನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಭಾರತದಲ್ಲಿ ನೂರಾರು ಭಾಷೆಗಳು, ಸಂಸ್ಕೃತಿಗಳಿವೆ. ಆಧುನಿಕ ಹಿಂದಿ ಸಾಹಿತ್ಯದ ಪಿತಾಮಹ ಭರತೇಂದು ಹರಿಶ್ಚಂದ್ರ ಹಾಗೂ ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರಂತಹ ಮಹಾನ್ ಸಾಹಿತಿಗಳು ಸಹ ಮಾತೃಭಾಷೆಗೆ ಹೆಚ್ಚು ಒತ್ತು ನೀಡುತ್ತಿದ್ದರು ಎಂದರು.
ವಿಶ್ವಸಂಸ್ಥೆ ಪ್ರಸಕ್ತ ವರ್ಷ-2019 ಅನ್ನು ''ಪ್ರಾದೇಶಿಕ ಭಾಷೆಗಳ ಅಂತರ ರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ, ಅಳಿವಿನ ಅಂಚಿನಲ್ಲಿರುವ ಭಾಷೆಗಳ ಸಂರಕ್ಷಣೆಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು ಎನ್ಸಿಸಿ ದಿನವಾಗಿ ಆಚರಿಸಲಾಗುತ್ತದೆ. ಎನ್ಸಿಸಿ ಎಂದರೆ ಸೇನೆ, ವಾಯುದಳ, ನೌಕಾಬಲ ಮೂರೂ ಸೇರ್ಪಡೆಗೊಂಡಿವೆ, ನಾಯಕತ್ವ, ದೇಶಭಕ್ತಿ, ನಿರಪೇಕ್ಷ ಸ್ವಯಂ ಸೇವೆ, ಶಿಸ್ತು, ಕಠಿಣ ಪರಿಶ್ರಮ ಎಲ್ಲವನ್ನೂ ಯುವಜನರು ಸ್ವಭಾವದಲ್ಲಿ ಮೇಳೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಡಿಸೆಂಬರ್ 7ರಂದು ಸೇನಾ ಸಶಸ್ತ್ರ ದಿನ ಆಚರಿಸಲಾಗುತ್ತಿದೆ, ಈ ದಿನದಂದು ನಮ್ಮ ವೀರ ಸೈನಿಕರ ಪರಾಕ್ರಮ, ಬಲಿದಾನವನ್ನು ನೆನಪಿಸಿಕೊಳ್ಳುತ್ತೇವೆ. ಯೋಧರ ತ್ಯಾಗ, ಬಲಿದಾವನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ಶಾಲೆಗಳಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಡಿಸೆಂಬರ್ನಲ್ಲಿ ಆಚರಿಸಬಹುದಾಗಿದೆ. ಪರೀಕ್ಷೆಗಳು ಹತ್ತಿರವಾಗುತ್ತಿವೆ, ಪೋಷಕರು ಒತ್ತಡದಿಂದ ಮುಕ್ತರಾಗಿರಬೇಕು, ಶಿಕ್ಷಕರು ಆತ್ಮವಿಶ್ವಾಸದಿಂದ ಇರಬೇಕು, ಪರೀಕ್ಷೆಗಳ ಕುರಿತು ಮುಂಬರುವ ದಿನದಲ್ಲಿ ಒಂದು ಚಚರ್ಾ ಕಾರ್ಯಕ್ರಮ ಮಾಡೋಣ ಎಂದು ಅವರು ಹೇಳಿದರು.
ಸಮುದ್ರ ಒಂದಲ್ಲ ಒಂದು ರೀತಿಯ ಕಸದಿಂದ ತುಂಬುತ್ತಿದೆ, ಕಳೆದ ಹಲವು ದಿನಗಳಿಂದ ಸ್ಕೂಬಾ ಡೈವರ್ಗಳು ಸಮುದ್ರದ ಸುಮಾರು 100 ಮೀಟರ್ ದೂರ, ಆಳವಾದ ನೀರಿನಲ್ಲಿ ಮುಳುಗಿ ಕಸವನ್ನು ಹೊರತೆಗೆಯುತ್ತಿರುವುದು, ಪ್ಲಾಸ್ಟಿಕ್ ಮುಕ್ತ ಭಾರತ ನಿಮರ್ಾಣಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.