ಹೆಚ್ಚಿನ ಮಟ್ಟದ ರಫ್ತು ಉತ್ತೇಜನಕ್ಕೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಗದಗ 17:   ಜಿಲ್ಲೆಯಲ್ಲಿನ   ರಫ್ತುದಾರರ ದತ್ತಾಂಶ    ತಯಾರಿಸಿ,  ಹೊಸ  ರಫ್ತುದಾರರನ್ನು ಗುರುತಿಸಿ   ಅವರಿಗೆ ಸೂಕ್ತ  ತರಬೇತಿ ಕೊಡುವುದು ಮತ್ತು   ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳ  ರಫ್ತು ಮಾಡಲು ರಫ್ತುದಾರರಿಗೆ  ಸಹಾಯ ಸೌಲಭ್ಯ ನೀಡುವುದು ಜಿಲ್ಲಾ ರಫ್ತು ಉತ್ತೇಜನ ಸಮಿತಿಯ ಉದ್ದೇಶವಾಗಿದೆ ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನುಡಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು  ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.   

ಉದ್ದಿಮೆದಾರರು ಹಾಗೂ ರಫ್ತುದಾರರಿಂದ ಅಹವಾಲು ಕೇಳಿ  ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು  ಜಿಲ್ಲೆಯಲ್ಲಿ ಉತ್ಪಾದಿಸಿದ ಬೆಳೆಗಳ ಈರುಳ್ಳಿ, ಮೆಣಸಿನಕಾಯಿ,  ಶೇಂಗಾ ಮುಂತಾದ ಬೆಳೆಗಳ  ತಾಂತ್ರಿಕ  ಗುಣಮಟ್ಟದ  ಪರಿಶೀಲನೆಗೆ  ಅಗತ್ಯವಾದ ಪ್ರಯೋಗಾಲಯಗಳ  ಹಾಗೂ  ಅಗತ್ಯದ ಕಾರ್ಖನೆಗಳ ಸೌಲಭ್ಯ   ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿಗಳು ತಿಳಿಸಿದರು.   

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಟಿ. ದಿನೇಶ  ಗದಗ ಜಿಲ್ಲೆಯಲ್ಲಿ   ಈಗಾಗಲೇ ಕೈಗಾರಿಕೆ ಸ್ಪಂದನ ಸಭೆಗಳನ್ನು ನಡೆಸಲಾಗುತ್ತಿದೆ.   ರಫ್ತುದಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ  ಹಾಗೂ ಅವರಿಗಿರುವ  ತೊಂದರೆ  ನಿವಾರಿಸಿ ರಫ್ತುದಾರರನ್ನು ಉತ್ತೇಜಿಸಲು     ಕೈಗಾರಿಕಾ ಇಲಾಖೆ  ಮುಂದಾಗಿದೆ  ಎಂದರು. ಜಿಲ್ಲೆಯಲ್ಲಿ  ರಫ್ತು ಕೇಂದ್ರ ಸ್ಥಾಪನೆ,   ರಫ್ತುದಾರರ   ಜಿ ಎಸ್ ಟಿ ,ಸೆಸ್ ಮರುಪಾವತಿ, ರಫ್ತು  ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ  ಹಮ್ಮಿಕೊಳ್ಳುವ ಕುರಿತು  ಸಭೆಯಲ್ಲಿ ಚರ್ಚಿಸಲಾಯಿತು.       

ಜಂಟಿ ಕೃಷಿ ನಿರ್ದೇಶಕ  ರುದ್ರೇಶ,  ಪರಿಸರ ಇಲಾಖೆಯ ಅಧಿಕಾರಿ ಬಿ. ರುದ್ರೇಶ,  ವಿವಿಧ ರಂಗಗಳ ಉದ್ದಿಮೆದಾರರು, ಕೆ.ಎಸ್.ಎಫ್.ಸಿ., ನಬಾರ್ಡ ಅಧಿಕಾರಿಗಳು  ಸಭೆಯಲ್ಲಿ ಭಾಗವಹಿಸಿದ್ದರು.