ಪೊಲೀಸ್ ಠಾಣೆ ಸಮೀಪವೇ ಕಳ್ಳರ ಕೈಚಳಕ, 8 ಐಷಾರಾಮಿ ವಾಹನ ಕಳವು

ಲಖನೌ, ನ 05:   ಉತ್ತರ ಪ್ರದೇಶ ರಾಜಧಾನಿಯ ಮಹಾನಗರ ಪ್ರದೇಶದ ಪೊಲೀಸ್ ಠಾಣೆ ಬಳಿಯೇ ಮಂಗಳವಾರ ಮುಂಜಾನೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ಒಂದೇ ಸ್ಥಳದಿಂದ ಎಂಟು ಐಷಾರಾಮಿ ವಾಹನಗಳನ್ನು ಕದ್ದಿದ್ದಾರೆ. ಮಹಾನಗರ ಪೊಲೀಸ್ ಠಾಣೆಯಿಂದ 500 ಮೀಟರ್ ದೂರದಲ್ಲಿ ಮತ್ತು ಬಾದ್ಶಾಹನಗರ ಮೆಟ್ರೋ ನಿಲ್ದಾಣದ ಎದುರು ಮೆಟ್ರೊ ಕಾರ್ ಬಜಾರ್ನ ಬಿಎಂಡಬ್ಲ್ಯು ಸೇರಿದಂತೆ 8 ವಾಹನಗಳನ್ನು ದರೋಡೆಕೋರರು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.    ಮೆಟ್ರೋ ಕಾರ್ ಬಜಾರ್ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡುತ್ತದೆ ಮತ್ತು ಅವರ ಗ್ಯಾರೇಜ್ನಲ್ಲಿ ಹಲವಾರು ವಾಹನಗಳನ್ನು ನಿಲ್ಲಿಸಲಾಗಿತ್ತು. ಅಪರಾಧಿಗಳು ಮುಖ್ಯ ಗೇಟ್ನ ಬೀಗವನ್ನು ಮುರಿದು,  ಆಫೀಸ್ ಲಾಕರ್ನಿಂದ ವಾಹನಗಳ ಕೀಲಿಗಳನ್ನು ತೆಗೆದುಕೊಂಡಿದ್ದಾರೆ.    ಕಳವು ಮಾಡಿದ ವಾಹನಗಳು ಬಿಎಂಡಬ್ಲ್ಯು (ಯುಪಿ 32 ವೈ 4804), ಆಡಿ (ಯುಪಿ 32 ಬಿಕ್ಯೂ 2100), ಫಾಚರ್ೂನರ್ (ಯುಪಿ 32 ಬಿಟಿ 0066) ಮತ್ತು ಇತರ ಎರಡು ಐ 20, ಎರಡು ಎಂಡೀವರ್ ಮತ್ತು ಒಂದು ಇನ್ನೋವಾ ಎಂದು ಗುರುತಿಸಲಾಗಿದೆ.    ಏತನ್ಮಧ್ಯೆ, ವ್ಯಾಪಾರಿಗಳು, ಈ ದರೋಡೆ ವಿರುದ್ಧ ಪ್ರತಿಭಟಿಸುತ್ತಿದ್ದು, 24 ಗಂಟೆಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚುವಂತೆರ ಪೊಲೀಸರಿಗೆ ಗಡುವು ನೀಡುವ ಮೂಲಕ ಒತ್ತಡ ಹೇರಿದ್ದಾರೆ.