ಮಹಾಲಿಂಗಪುರದಲ್ಲಿ ಸೆ.22 ರಿಂದ ಅ.1ವರಗೆ ನವರಾತ್ರಿ ಉತ್ಸವ.

ಮಹಾಲಿಂಗಪುರದಲ್ಲಿ ಸೆ.22 ರಿಂದ ಅ.1ವರಗೆ ನವರಾತ್ರಿ ಉತ್ಸವ. Navratri festival in Mahalingapur from September 22 to October 1.

ಮಹಾಲಿಂಗಪುರದಲ್ಲಿ ಸೆ.22 ರಿಂದ ಅ.1ವರಗೆ ನವರಾತ್ರಿ ಉತ್ಸವ. 

ಮಹಾಲಿಂಗಪುರ16: ಸ್ಥಳೀಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸೆ.22ರಿಂದ ಅ.1ರವರೆಗೆ ನವರಾತ್ರಿ ನಿಮಿತ್ತ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಜರುಗಲಿದೆ. ಪ್ರತಿದಿನ ಸಂಜೆ 7 ರಿಂದ 8 ಗಂಟೆ ವರೆಗೆ ಶ್ರೀ ಅಭಿನವ ರೇವಣಸಿದ್ದ ಪಟ್ಟದೇವರು ಮೈಂದರಗಿ ಸೊಲ್ಲಾಪುರ, ಮತ್ತು ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳಿಂದ ಶ್ರೀ ದೇವಿ ಪುರಾಣ ಪ್ರವಚನ ಹಾಗೂ ಸಮಸ್ತ ಭಜನಾ ಮಂಡಳಿಗಳಿಂದ ಭಜನಾ ಸೇವೆ ಜರುಗುವುದು. 

ಸೆ. 22 ರಂದು ಮುಂಜಾನೆ 8:00 ಕುಂಭಮೇಳ ಮತ್ತು ಸಕಲ ವಾದ್ಯಗಳೊಂದಿಗೆ ಶ್ರೀ ದೇವಿ ಮೂರ್ತಿ ಶ್ರೀ ಚಕ್ರ ಹಾಗೂ ಕಳಸಗಳ ಮೆರವಣಿಗೆಯು ಸಿದ್ದಾರೂಢ ಆಶ್ರಮದಿಂದ  ಶ್ರೀ ಬನಶಂಕರಿ ದೇವಸ್ಥಾನದವರೆಗೆ ಜರಗಲಿದೆ. 

ಪ್ರತಿ ದಿನವೂ ಅನ್ನಪ್ರಸಾದ ಸೇವೆ ಇದ್ದು, ಹತ್ತು ದಿನವೂ ವಿಶೇಷ ಕಾರ್ಯಕ್ರಮಗಳಿವೆ. ಅನುಕ್ರಮವಾಗಿ ಸ್ಥಳೀಯ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು, (ಸರಿಗಮಪ ಖ್ಯಾತಿ ಸೀಸನ್ 20ರ)ಅನಗಾ ಪಾಟೀಲ, ಬಾಗಲಕೋಟೆ ಇವರಿಂದ ಗಾಯನ, ಹಾಸ್ಯ ಕಲಾವಿದ ಶರಣು ಯಮನೂರ ಮತ್ತು ಅಯೂಬ್ ಜಮಖಂಡಿಯ ಅವರಿಂದ ಹಾಸ್ಯ ಮತ್ತು ಜಾದೂಗಾರ ಕಾರ್ಯಕ್ರಮ, ಪ್ರಕಾಶ ಜೀ ಭಾರತೀಯ ನಾರಿ ಸಂಸ್ಕೃತಿ ಕಾರ್ಯಕ್ರಮ, ಮತ್ತು ಚನ್ನಪ್ಪ ಹುದ್ದಾರ ಅವರಿಂದ ಗಾಯನ ಕಾರ್ಯಕ್ರಮ, ಶ್ರೀ ನಾಟ್ಯ ಕಲಾ ಕೇಂದ್ರ ಹೊಸಪೇಟೆ ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕು.ಶಿವಾನಿ  ಸಿವದಾಸಸ್ವಾಮಿ ಸುಗಮ ಸಂಗೀತ ಕಾರ್ಯಕ್ರಮ, ಕು. ದಿಯಾ ಹೆಗಡೆ ಅವರಿಂದ ಗಾಯನ ಕಾರ್ಯಕ್ರಮ, ಸ್ಥಳೀಯ ವಿಕೆ ಸ್ಟೈಲ್ ಡ್ಯಾನ್ಸ್‌ ಮತ್ತು ಫಿಟ್ನೆಸ್ ಅಕಾಡೆಮಿ ವತಿಯಿಂದ ನೃತ್ಯ ವೈಭವ ಕಾರ್ಯಕ್ರಮ, ಸ್ಥಳೀಯ ರವೀಂದ್ರ ಸೋರಗಾಂವಿ, ಅವರಿಂದ ಸುಗಮ ಸಂಗೀತ, ಸ್ಥಳೀಯ ಕಲಾವಿದರಿಂದ ಮನು ಮೆಲೋಡಿಸ್ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭರತನಾಟ್ಯ ಹಾಗೂ ಪ್ರತಿನಿತ್ಯ ಗವಾಯಿಗಳಾದ ಶ್ರೀಕಾಂತ.ಲ.ನಾಯಕ ಮತ್ತು ಹಣಮಂತ ಅಂಕದ, ತಬಲಾ ಸೇವೆ ಕಾರ್ಯಕ್ರಮಗಳು ಜರುಗಲಿವೆ. 

ಮಂಗಳವಾರ ಸೆ.23, 30ರಂದು ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ ಕುಂಕುಮಾರ್ಚನೆ, ಶುಕ್ರವಾರ ಸೆ.26ರಂದು ಶೋಭಾ ಚಂದ್ರಶೇಖರ ಹುಣಶ್ಯಾಳ ಅವರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿವೆ, ಮತ್ತು ಈ ಕಾರ್ಯಕ್ರಮದಲ್ಲಿ ಹಾಲಿ ಮತ್ತು ಮಾಜಿ ಮಂತ್ರಿಗಳು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿರೋಧ ಪಕ್ಷದ ನಾಯಕರು, ರಾಜಕೀಯ ಗಣ್ಯ ಮಾನ್ಯರು, ಸಾಮಾಜಿಕ ಸಾಧಕರು ಭಾಗವಹಿಸಲಿದ್ದಾರೆ ಎಂದು ಶ್ರೀ ಬನಶಂಕರಿ ದೇವಸ್ಥಾನದ ಸಮಾಜದ ಹಿರಿಯ ಮುಖಂಡರು ಪ್ರಕಟಣೆ ತಿಳಿಸಿದ್ದಾರೆ.