ಮಹಾಲಿಂಗಪುರ೨೮: ಸ್ಥಳೀಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸೆ.29ರಿಂದ ಅ.7ರವರೆಗೆ ನವರಾತ್ರಿ ನಿಮಿತ್ತ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಜರುಗಲಿದೆ. ನಿತ್ಯ ಸಂಜೆ 7ರಿಂದ 8 ಗಂಟೆ ವರೆಗೆ ಹುಣಶ್ಯಾಳ ಗ್ರಾಮದ ಸಿದ್ದಲಿಂಗ ಕೈವಲ್ಯಾಶ್ರಮದ ನಿಜಗುಣಶ್ರೀಗಳಿಂದ ಶ್ರೀ ದೇವಿ ಪುರಾಣ ಪ್ರವಚನ ಹಾಗೂ ಸಮಸ್ತ ಭಜನಾ ಮಂಡಳಿಗಳಿಂದ ಭಜನಾ ಸೇವೆ ಜರುಗುವುದು.
ಪ್ರತಿ ದಿನವೂ ಅನ್ನಪ್ರಸಾದ ಸೇವೆ ಇದ್ದು, ಒಂಭತ್ತು ದಿನವೂ ವಿಶೇಷ ಕಾರ್ಯಕ್ರಮಗಳಿವೆ. ಅನುಕ್ರಮವಾಗಿ ಸ್ಥಳೀಯ ಕಲಾವಿದರಿಂದ ಸಂಗೀತ ಭರತ ನಾಟ್ಯ, ಮೈಸೂರು ದೇವಾನಂದ ವರಪ್ರಸಾದ ತಂಡದಿಂದ ಜಾನಪದ ತತ್ವಗಳು, ಬೆಂಗಳೂರಿನ ಸೀಮಾ ರಾಯ್ಕರ ಅವರಿಂದ ಸುಗಮ ಸಂಗೀತ, ಕೋತಬಾಳ ಅರುಣೋದಯ ಕಲಾ ತಂಡದಿಂದ ಜಾನಪದ ವೈವಿದ್ಯ ನೃತ್ಯ, ಸ್ಥಳೀಯ ಗುರುರಾಜ ಹೊಸಕೋಟಿ ಅವರಿಂದ ಜನಪದ ರಸಮಂಜರಿ, ಕುಂದರಗಿ ಅಮರೇಶ್ವರ ಶ್ರೀಗಳಿಂದ ವಿಶೇಷ ಪ್ರವಚನ, ಶ್ರೀರಾಮ ಕಾಸರ ಹಾಗೂ ಸ್ಥಳೀಯ ರವೀಂದ್ರ ಸೋರಗಾಂವಿ ಅವರಿಂದ ಸುಗಮ ಸಂಗೀತ, ಸ್ಥಳೀಯ ಕಲಾವಿದರಿಂದ ಸಂಗೀತ, ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ.
ಮಂಗಳವಾರ ಅ.1ರಂದು ಅನ್ನಪೂಣರ್ೇಶ್ವರಿ ನೇಕಾರ ಮಹಿಳಾ ಸಂಘದಿಂದ ಕುಂಕುಮಾರ್ಚನೆ, ಶುಕ್ರವಾರ ಅ.4ರಂದು ಶೋಭಾ ಚಂದ್ರಶೇಖರ ಹುಣಶ್ಯಾಳ ಅವರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.