ಸಮಾಜದ ಯುವಕ ನವೀನ ವಿಠಲ್ ಜಾಣಾ ಅವರು ಭಾರತೀಯ ಸೇನೆಗೆ ಆಯ್ಕೆ

Naveen Vitthal Jana, a young man from the society, has been selected for the Indian Army.

ಸಮಾಜದ ಯುವಕ ನವೀನ ವಿಠಲ್ ಜಾಣಾ ಅವರು ಭಾರತೀಯ ಸೇನೆಗೆ ಆಯ್ಕೆ  

ಕೊಪ್ಪಳ  28: ಜಿಲ್ಲೆಯ ಭಾಗ್ಯನಗರ ಪದ್ಮಶಾಲಿ ಸಮಾಜದ ಯುವಕ ನವೀನ ವಿಠಲ್ ಜಾಣಾ ಅವರು ಭಾರತೀಯ ಸೇನೆಗೆ ಆಯ್ಕೆ ಆಗಿದ್ದು, ಭಾಗ್ಯನಗರದ ಪದ್ಮಶಾಲಿ ಸಮಾಜ ವತಿಯಿಂದ ನವೀನ್ ಜಾಣ ಅವರಿಗೆ ಗೌರವ ಪೂರ್ವಕ ಸನ್ಮಾನಿಸ ಭಾರತಾಂಬೆಯ ಇನ್ನೂ ಹೆಚ್ಚಿನ ಸೇವೆ ಮಾಡಲೆಂದು ಆಶೀರ್ವದಿಸಿದರು.130 ಕೋಟಿ ಜನರಲ್ಲಿ  ಭಾರತಾಂಭೆ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಹಾಗೂ ನನ್ನ ಜೀವನವನ್ನು ಭಾತರ ಮಾತೆಯನ್ನು ರಕ್ಷಿಸಲು ಮುಡುಪಾಗಿಡುವೆ ಎಂದು ಯುವ ಸೈನಿಕ ನವೀನ  ಜಾಣ ಮಾತಾನಾಡಿದರು.ಈ ಕಾರ್ಯಕ್ರಮದಲ್ಲಿ ಸಮಾಜದ ಗೌರವ ಅದ್ಯಕ್ಷ ಏಕನಾಥಪ್ಪ ದೇವದುರ್ಗಾ, ಅದ್ಯಕ್ಷ ನಾರಾಯಣಪ್ಪ ಚಳಮರದ, ಮುಖಂಡರಾದ ಮಹಾದೇವಪ್ಪ, ಅಶೋಕ ಜಿ, ರಾಮಣ್ಣ ಸಿ, ಯಂಕಪ್ಪ ವಾಯ್, ಶಂಕರ್ ಜಿ, ರವಿ, ಲಕ್ಷ್ಮಣ, ಜೆಪಿ, ಮೋಹನ್ ಜೆ, ಪಟ್ಟಣ ಪಂಚಾಯಿತಿ ಸದಸ್ಯ ಶಿವರಾಮ ಮ್ಯಾಗಳಮನಿ ಇತರರಿದ್ದರು. ಸುರೇಶ ದರಗದಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ​‍್ಪ ಜಾಣಾ, ಈರಣ್ಣ ಪಗಡಾಲ್ ನಿರ್ವಹಿಸಿದರು.