ಲೋಕದರ್ಶನ
ವರದಿ
ಇಂಡಿ 17:
9 ದಿನಗಳ ಕಾಲ ಉಪವಾಸ ಮಾಡುವ
ಮೂಲಕ ಆಚರಿಸಿಕೊಂಡು ಬಂದ ನವರಾತ್ರಿಯ ಸಸಿ
ಕಾರ್ಯಕ್ರಮದ ಫಲವಾಗಿ ಜಗನ್ಮಾತೆಯ ಕೃಪಾಶಿವರ್ಾದಿಂದ ಮಳೆರಾಯನ ಆಗಮನವಾಗಿದ್ದು ಸಂತಸ ತಂದಿದೆ ಎಂದು
ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಸಾಲೋಟಗಿ
ಗ್ರಾಮದ ಬುಗಟಗೇರ ತಾಂಡಾ ಜಗದಂಬಾ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ನವರಾತ್ರಿಯ 9 ದಿನಗಳ ನಾಡದೇವಿಯ ಸಸಿ ಬಿಳ್ಕೊಡುವ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ದೆವಸ್ಥಾನದಲ್ಲಿ ಚುನಾವಣೆ
ಪ್ರಚಾರದಲ್ಲಿ ನುಡಿದಂತೆ ಪ್ರಕಾಶ ರಾಠೋಡ ಅವರಿಗೆ ಒಂದು ವರ್ಷದಲ್ಲಿ ಯಾವುದಾದರೂ
ಒಂದು ಸ್ಥಾನ ಮಾನ ಕೊಡಿಸದಿದ್ದರೆ ಆಯ್ಕೆಯಾದ
ಒಂದು ವರ್ಷದಲ್ಲಿ ರಾಜಿನಾಮೆ ಸಲ್ಲಿಸುವುದಾಗಿ ನುಡಿದಿದ್ದೆ ಅದರಂತೆ ಇಂದೂ ಪ್ರಕಾಶ ರಾಠೋಡ
ಅವರು ವಿಧಾನ ಪರಿಷತ ಸದಸ್ಯರಾಗಲಿದ್ದಾರೆ. ಬಂಜಾರ ಸಮಾಜದ ಏಳಿಗೆಗಾಗಿ ಕೆ.ಟಿ.ರಾಠೋಡ,
ಎಲ್.ಆರ್.ನಾಯಕ ಪರಿಶ್ರಮದ
ಫಲವಾಗಿ ಇಂದು ಎಸ್.ಸಿ
ಕೆಟಗರಿಯ ಲಾಭ ದೊರಿತಾ ಇದೇ.
ಇದಕ್ಕೆ ಕಾರಣ ದಿ. ಇಂದಿರಾಗಾಂಧಿಜಿಯವರು
ಹಾಗೂ ಡಿ.ದೇವರಾಜ ಅರಸರು
ನೀಡಿದ ಕೊಡುಗೆಯಾಗಿದ್ದು ಅವರನ್ನು ಸ್ಮರಿಸುವ ಮೂಲಕ ತಮ್ಮ ಜೀವನುದ್ದಕ್ಕೂ
ಕಾಂಗ್ರೇಸ್ ಪಕ್ಷ ನೀಡಿದ ಈ
ಕೊಡುಗೆ ಸದಾ ರುಣಿಯಾಗಿರಬೇಕು ಎಂದರು.
ಬಂಜಾರ ಸಮುದಾಯದವರು ನನ್ನ ಮೇಲೆ ಇಟ್ಟಿರುವ
ಪ್ರಿತಿ ವಿಶ್ವಾಸ ಚುನಾವಣೆಯಲ್ಲಿ ತೋರಿಸಿದ್ದು ಮರೆಯುವಂತಿಲ್ಲ. ಇಂದಿನ ರಾಜಕಾರಣದಲ್ಲಿ ಒಂದೇ ಸಮುದಾಯದ ಮೇಲೆ
ರಾಜಕಾರಣ ಮಾಡುವುದು ಅಸಾಧ್ಯ ಸರ್ವ ಜನಾಂಗ ಪ್ರಿತಿ
ವಿಶ್ವಾಸ ಇದ್ದಾಗ ಮಾತ್ರ ಅದು ಸಾದ್ಯವಾಗುತ್ತದೆ ಎಂಬುದನ್ನು
ನಮ್ಮ ತಾಲೂಕಿನ ಮಹಾಜನತೆ ತೊರಿಸಿಕೊಡುವ ಮೂಲಕ ಸಂದೇಶವನ್ನು ನೀಡಿದ್ದಾರೆ.
ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ, ಎಪಿಎಮ್ಸಿ ಅದ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ಎಪಿಎಮ್ಸಿ ಉಪಾದ್ಯಕ್ಷ ಬಾಬು ಚವ್ಹಾಣ, ನಾಯಕ
ಮಾಥನಾಡಿದರು. ಮಹಾರಜ ಕಾರ್ಯಕ್ರಮದ ಸಾನಿದ್ಯ ವಹಸಿದ್ದರು. ವೇದಿಕೆ ಮೇಲೆ ಮಾಜಿ ಎಪಿಎಮ್
ಸಿ ಅದ್ಯಕ್ಷ ಭೀಮಣ್ಣ ಕವಲಗಿ, ತಾಪಂ ಸದಸ್ಯ ಜೀತಪ್ಪ
ಕಲ್ಯಾಣಿ, ಗಡ್ಡದ ಸರ, ಇಲಿಯಾಸ ಬೋರಾಮಣಿ,
ಜಾವಿ ಮೋಮಿನ, ಶಂಕರ ಸರಜಾಪೂರ ಸೇರಿದಂತೆ
ಅನೇಕರಿದ್ದರು. ಜಯರಾಮ ಚ್ವಹಾಣ ಸ್ವಾಗತಿಸಿ ನೀರೂಪಿಸಿದರು.