ಶ್ರೀನಗರ, ಜ 27: ಕಾಶ್ಮೀರ ಕಣಿವೆಯಲ್ಲಿ 71 ನೇ ಗಣರಾಜ್ಯೋತ್ಸವ ಸಮಯದಲ್ಲಿನ ಬಿಗಿ ಪರಿಸ್ಥಿತಿ ತಿಳಿಯಾಗಿ, ಸೋಮವಾರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಈ ನಡುವೆ ಕಣಿವೆಯಲ್ಲಿನ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಭದ್ರತಾ ಕಾರಣಗಳಿಂದಾಗಿ ನಾಲ್ಕು ದಿನಗಳವರೆಗೆ ಮುಚ್ಚಿದ್ದ ಬೋಧನಾ ಮತ್ತು ತರಬೇತಿ ಕೇಂದ್ರಗಳನ್ನು ಸೋಮವಾರ ಮತ್ತೆ ತೆರೆಯಲಾಗಿದೆ.
ಕಾಶ್ಮೀರದಲ್ಲಿ, ವಿಶೇಷವಾಗಿ ಶ್ರೀನಗರದಲ್ಲಿ ಯಾವುದೇ ಉಗ್ರಗಾಮಿ ಬೆದರಿಕೆ ದಾಳಿಯನ್ನು ತಡೆಯಲು ಭದ್ರತಾ ಪಡೆಗಳನ್ನು ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ರಸ್ತೆ ತಡೆ ಮತ್ತು ನಾಕಾಗಳನ್ನು ಸಹ ತೆಗೆದುಹಾಕಲಾಗಿದೆ ಎಂದೂ ಅವರು ಹೇಳಿದರು.
ಬೇಸಿಗೆ ರಾಜಧಾನಿ, ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಎಲ್ಲಾ ರಸ್ತೆಗಳಲ್ಲಿ ಸಂಚಾರ ಸಾಮಾನ್ಯವಾಗಿ ನಡೆಯುತ್ತಿದ್ದು, ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಇಂದು ಎಂದಿನಂತೆ ತೆರೆದಿವೆ.
ಕಣಿವೆಯಲ್ಲಿ ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ಒಂದು ದಿನ ಅಮಾನತುಗೊಂಡ ನಂತರ ಸೋಮವಾರ ಮತ್ತೆ ರೈಲು ಸೇವೆ ಪುನರಾರಂಭಿಸಲಾಗಿದೆ ಮೊಬೈಲ್ ಫೋನ್ ಸೇವೆ 9 ಗಂಟೆಗಳ ಕಾಲ ಕಾಲ ಸ್ಥಗಿತವಾಗಿತ್ತು.
ಬೇಸಿಗೆಯ ರಾಜಧಾನಿಯ ನರ ಕೇಂದ್ರವಾದ ಲಾಲ್ ಚೌಕ್, ಹರಿ ಸಿಂಗ್ ಹೈ ಸ್ಟ್ರೀಟ್ಸ್ (ಎಚ್‌ಎಸ್‌ಎಚ್‌ಎಸ್), ಬಟಮಾಲೂ, ದಾಲ್ ಗೇಟ್ ಮತ್ತು ಪೊಲೊ ವ್ಯೂ ಸೇರಿದಂತೆ ನಗರದ ಪ್ರಮುಖ ಕೇಂದ್ರದಲ್ಲಿ ಇತರ ಚಟುವಟಿಕೆಗಳು ಪುನರಾರಂಭಗೊಂಡಿವೆ.
ಕಾಶ್ಮೀರದಲ್ಲಿ ಮುಖ್ಯ ಗಣರಾಜ್ಯೋತ್ಸವ ನಡೆಯುತ್ತಿದ್ದ ಎಸ್ ಕೆ ಕ್ರಿಕೆಟ್ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆ ತಡೆಗಳನ್ನು ತೆಗೆದುಹಾಕಲಾಗಿದೆ ಮತ್ತು ನಾಗರಿಕ ಮಾರ್ಗಗಳಲ್ಲಿ ರಸ್ತೆ ಸಂಚಾರ ಎಂದಿನಂತೆ ಸಾಮಾನ್ಯವಾಗಿದೆ.
ಕಣಿವೆಯಲ್ಲಿ ನಾಲ್ಕು ದಿನಗಳ ನಂತರ ಕೋಚಿಂಗ್ ಮತ್ತು ಬೋಧನಾ ಕೇಂದ್ರಗಳಲ್ಲಿ ಸಾಮಾನ್ಯ ತರಗತಿಗಳನ್ನು ಪುನರಾರಂಭಿಸಲಾಗಿದೆ ಅಲ್ಲಿ ಭದ್ರತಾ ಕಾರಣಗಳಿಗಾಗಿ ಈ ಸಂಸ್ಥೆಗಳ ಆಡಳಿತವನ್ನು ಭಾನುವಾರದವರೆಗೆ ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದ್ದರು.