ನವದೆಹಲಿ, ಮೇ 23,ಅಂಫಾನ್ ಚಂಡಮಾರುತದಿಂದಾಗಿ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಜನರ ಸ್ಥಳಾಂತರವಾಗಿದೆ. ಈ ವರದಿಗಳ ಮಧ್ಯೆ, ನೈಸರ್ಗಿಕ ವಿಪತ್ತುಗಳು, ಸಂಘರ್ಷ ಮತ್ತು ಹಿಂಸಾಚಾರದಿಂದಾಗಿ 2019 ರಲ್ಲಿ ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಈ ಅಂಕಿ ಅಂಶವು ವಿಶ್ವದಲ್ಲೇ ಅತಿ ಹೆಚ್ಚು ಆಂತರಿಕ ಸ್ಥಳಾಂತರಗಳನ್ನು ಹೊಂದಿದೆ. ಭಾರತದ ನಂತರ ಫಿಲಿಪೈನ್ಸ್, ಬಾಂಗ್ಲಾದೇಶ ಮತ್ತು ಚೀನಾ ದೇಶಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.ಯುಎನ್ ಚಿಲ್ಡ್ರನ್ಸ್ ಫಂಡ್ –ಯುನಿಸೆಫ್ ನ ವರದಿ 'ಲಾಸ್ಟ್ ಅಟ್ ಹೋಮ್' 2019 ರಲ್ಲಿ ಸುಮಾರು 33 ಮಿಲಿಯನ್ ಹೊಸ ಸ್ಥಳಾಂತರಗಳನ್ನು ವಿಶ್ವದಾದ್ಯಂತ ದಾಖಲಿಸಲಾಗಿದೆ ಎಂದು ಹೇಳಿದೆ. ಈ ಪೈಕಿ ಸುಮಾರು 25 ದಶಲಕ್ಷ ಜನರು ನೈಸರ್ಗಿಕ ವಿಪತ್ತಿನಿಂದ, 8.5 ದಶಲಕ್ಷ ಮಂದಿ ಸಂಘರ್ಷ ಮತ್ತು ಹಿಂಸಾಚಾರದ ಪರಿಣಾಮದಿಂದಾಗಿ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.