ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡವು 'ವೈವಿಧ್ಯತೆಯಲ್ಲಿ ಏಕತೆ' ಯ ಸಂಕೇತ: ಅದಿತಿ

ನವದೆಹಲಿ, ಜೂನ್ 29: ಹಿರಿಯ ಮಹಿಳಾ ರಾಷ್ಟ್ರೀಯ ತಂಡವು "ವೈವಿಧ್ಯತೆಯಲ್ಲಿ ಏಕತೆ" ಯ ಮನೋಭಾವವನ್ನು ಮತ್ತಷ್ಟು ಬಲಪಡಿಸಿದೆ ಎಂದು ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಗೋಲ್ ಕೀಪರ್ ಅದಿತಿ ಚೌಹಾನ್ ಹೇಳಿದ್ದಾರೆ.ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಟಿವಿಯೊಂದಿಗೆ ಮಾತನಾಡಿದ ಅದಿತಿ, “ನಾನು ರಾಷ್ಟ್ರೀಯ ತಂಡಕ್ಕಾಗಿ ಆಡಲು ಪ್ರಾರಂಭಿಸಿದಾಗ, ಆ ಸಮಯದಲ್ಲಿ ಮಣಿಪುರ ಆಟಗಾರರ ಪ್ರಾಬಲ್ಯವಾಗಿತ್ತು. ಆದರೆ ಈಗ ನಮ್ಮ ತಂಡವು ದೇಶದ ವಿವಿಧ ಭಾಗಗಳಿಂದ ಅನೇಕ ಆಟಗಾರರನ್ನು ಹೊಂದಿದೆ. ಇದರೊಂದಿಗೆ, ನಮ್ಮ ತಂಡವು ಒಂದಾಗುವುದರ ಹೊರತಾಗಿ "ವೈವಿಧ್ಯತೆಯಲ್ಲಿ ಏಕತೆ" ಯ ಸಂಕೇತವಾಗಿದೆ" ಎಂದಿದ್ದಾರೆ. "ನಮ್ಮ ಬಹುದೊಡ್ಡ ಶಕ್ತಿ ವೈವಿಧ್ಯತೆಯಲ್ಲಿ ಏಕತೆಯ ಭಾವನೆ - ನಮ್ಮ ಏಕತೆಯ ರಹಸ್ಯ" ಎಂದು ಹೇಳಿದರು. ತಂಡದ ಎಲ್ಲ ಆಟಗಾರರು ದೇಶದ ವಿವಿಧ ಭಾಗಗಳಿಂದ ಬಂದವರು. ನಾವೆಲ್ಲರೂ ಒಬ್ಬರಿಗೊಬ್ಬರ ಆಟ ನೋಡಿ ಬಹಳಷ್ಟು ಕಲಿಯುತ್ತೇವೆ” ಎಂದು ತಿಳಿಸಿದ್ದಾರೆ.