ಪರಿಸರ ಸ್ನೇಹಿ ಕೃಷಿಯಂತ್ರ ತಯಾರಿಕೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಶಿಗ್ಗಾವಿ19 ಃ ಇತ್ತೀಚೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ರಾಜ್ಯಮಟ್ಟದ ಇನ್ಸ್ಪೈರ್ ಅವಾರ್ಡ ಮಾನಕ ವಸ್ತು ಪ್ರದರ್ಶನದಲ್ಲಿ ಸ್ಥಳೀಯ ಮಾಮ್ಲೇದೇಸಾಯಿ ಪ್ರೌಢಶಾಲೆಯ ಕು.ಮಹಾದೇವಪ್ಪ ಕುಂಕುರ, ಅಕ್ಕಮ್ಮಾ ದೊಡ್ಡಮನಿ ಮತ್ತು ಶಿಗ್ಗಾವಿ ತಾಲೂಕಾ ಶಿಕ್ಷಣ ಸಮಿತಿ ಪ್ರಾಥಮಿಕ ಶಾಲೆಯ ಸುವರ್ಣ ಎಂ ಭಾಗವಹಿಸಿದ್ದರು.

 ಇವರಲ್ಲಿ ಅಕ್ಕಮ್ಮ ದೊಡ್ಡಮನಿ ಪರಿಸರ ಸ್ನೇಹಿ ಕೃಷಿಯಂತ್ರವನ್ನು ಕೆ ಎಸ್ ದಳವಾಯಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರದಶರ್ಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀತರ್ಿ ತಂದಿದ್ದಾಳೆ. ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಕೆ ಚಿಕ್ಕಮಠ ಮತ್ತು ವಿದ್ಯಾಲಯದ ಸಮಿತಿಯ ಉಪಾಧ್ಯಕ್ಷ ದತ್ತಣ್ಣ ವೆಣರ್ೇಕರ ಗೌರವ ಕಾರ್ಯದಶರ್ಿ ಎಸ್ ಪಿ ಜೋಶಿ  ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು ಮತ್ತು ವಿದ್ಯಾಲಯದ ಪ್ರಾಚಾರ್ಯ ಆರ್ ಎಸ್ ಭಟ್, ಉಪಪ್ರಾಚಾರ್ಯ ಜಿ ಎನ್ ಯಲಿಗಾರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ಎಮ್ ಆರ್ ಬಾಗೂರ ಹಾಗೂ ವಿದ್ಯಾಲಯದ ಸರ್ವ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.