ವಿಕಸಿತ್ ಭಾರತ್ ಯೂಥ್ ಪಾರ್ಲಿಮೆಂಟ್-2025 ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವ
ವಿಜಯಪುರ 10 : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಎನ್.ಎಸ್.ಎಸ್ ಕೋಶದ ವತಿಯಿಂದ ವಿಕಸಿತ್ ಭಾರತ್ ಯೂಥ್ ಪಾರ್ಲಿಮೆಂಟ್-2025 ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವ ಆಯೋಜಿಸಿದೆ. ವಿಕಸಿತ್ ಭಾರತ್ ಯೂಥ್ ಪಾರ್ಲಿಮೆಂಟ್-2025 ಎಂಬ ಶೀರ್ಷಿಕೆಯಡಿಯಲ್ಲಿ ಈ ವರ್ಷದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಜರುಗಲಿದ್ದು ರಾಷ್ಟ್ರದಾದ್ಯಂತ ಏಕ ಕಾಲಕ್ಕೆ ಆಯೋಜನೆಗೊಳ್ಳಲಿದೆ. 18 ರಿಂದ 25 ವರ್ಷ ವಯೋಮಾನದ - ಯುವ ಜನತೆ ಜಿಲ್ಲೆ, ರಾಜ್ಯ ಹಾಗೂ ಹಿ ರಾಷ್ಟ್ರ ಮಟ್ಟದ ಮೂರು ಹಂತಗಳಲ್ಲಿ ಆಯೋಜನೆಗೊಳ್ಳುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿಕಸಿತ ಭಾರತದ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಬಹುದಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಮೂರು ನಿಮಿಷಗಳ ಅವಧಿಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್: ಪೇವಿಂಗ್ ದಿ ವೇ ಫಾರ್ ವಿಕಸಿತ್ ಭಾರತ್-ಒಂದು ರಾಷ್ಟ್ರ, ಒಂದು ಚುನಾವಣೆ: ವಿಕಸಿತ ಭಾರತಕ್ಕೆ ದಾರಿ ಮಾಡಿ ಕೊಡುವುದು ಎಂಬ ವಿಷಯದ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಬೇಕಿದ್ದು ಅತ್ಯುತ್ತಮವಾಗಿ ಮಂಡಿಸಲಾದ ಹತ್ತು ಸ್ಪರ್ಧಿಗಳ ಹೆಸರುಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗಾಗಿ ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು. ಪ್ರಾಥಮಿಕ ಹಂತದಲ್ಲಿ ಒಂದು ನಿಮಿಷದ ವಿಡಿಯೋ ಅಪ್ಲೋಡ್ ಮಾಡಲು ಕೊನೆಯ ದಿನಾಂಕವನ್ನು ಮಾರ್ಚ್ 16ರವರೆಗೂ ವಿಸ್ತರಿಸಲಾಗಿದ್ದು, ವಿಜಯಪುರ ಬಾಗಲಕೋಟ ಜಿಲ್ಲಾ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾನಿಲಯಗಳಲ್ಲಿ, ಪದವಿ ಕಾಲೇಜುಗಳಲ್ಲಿ, ಶಿಕ್ಷಣ ಮಹಾವಿದ್ಯಾಲಯಗಳಲ್ಲಿ, ದೈಹಿಕ ಶಿಕ್ಷಣ ಕಾಲೇಜುಗಳಲ್ಲಿ, ಇಂಜಿನಿಯರಿಂಗ್, ನಸಿಂರ್ಗ್, ಡೆಂಟಲ್, ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿ ಸಮೂಹ ಹಾಗೂ ಯುವ ಸಮುದಾಯ ಭಾಗವಹಿಸುವ ಮೂಲಕ ವಿಚಾರಗಳನ್ನು ಮಂಡನೆ ಮಾಡಲು ಕಲ್ಪಿಸಲಾಗಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೆ ಭಾಗವಹಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೈ ಭಾರತ್ ಪೋರ್ಟಲ್ನಲ್ಲಿ ನೊಂದಣಿ ಮಾಡಿಕೊಂಡು ಒಂದು ನಿಮಿಷದ 25 ಎಂ.ಬಿ ಗಾತ್ರದ ಸ್ವ ವಿಡಿಯೋವನ್ನು “ವಾಟ್ ಡಸ್ ವಿಕಸಿದ್ಧ ಭಾರತ ಮೀನ್ಸ್ ಟು ಮಿ” ಎಂಬ ವಿಷಯದ ಮೇಲೆ ಮೈ ಭಾರತ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡತಕ್ಕದ್ದು, ಆಯ್ಕೆಯಾದ 150 ಆಕಾಂಕ್ಷಿಗಳಿಗೆ ಸ್ಪರ್ಧೆ ನಡೆಸಲಾಗುವುತ್ತದೆ. ಹೆಚ್ಚಿನ ಮಾಹಿತಿಗೆ 9480392481, 9970823930 ಹಾಗೂ 9844998926 ಸಂಪರ್ಕಿಸಬಹುದು ಎಂದು ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.