ವಿಜಯಪುರ 07: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಕಸಿತ್ ಭಾರತ್ ಯೂಥ್ ಪಾರ್ಲಿಮೆಂಟ್-2025 ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವ ಆಯೋಜಿಸಿದೆ.
ವಿಕಸಿತ್ ಭಾರತ್ ಯೂಥ್ ಪಾರ್ಲಿಮೆಂಟ್-2025 ಎಂಬ ಶೀರ್ಷಿಕೆಯಡಿಯಲ್ಲಿ ಈ ವರ್ಷದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಜರುಗಲಿದ್ದು ರಾಷ್ಟ್ರದಾದ್ಯಂತ ಏಕ ಕಾಲಕ್ಕೆ ಆಯೋಜನೆಗೊಳ್ಳಲಿದೆ. 18 ರಿಂದ 25 ವರ್ಷ ವಯೋಮಾನದ - ಯುವ ಜನತೆ ಜಿಲ್ಲೆ, ರಾಜ್ಯ ಹಾಗೂ - ರಾಷ್ಟ್ರ ಮಟ್ಟದ ಮೂರು ಹಂತಗಳಲ್ಲಿ ಆಯೋಜನೆಗೊಳ್ಳುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿಕಸಿತ ಭಾರತದ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಬಹುದಾದಗಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಮೂರು ನಿಮಿಷಗಳ ಅವಧಿಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್: ಪೇವಿಂಗ್ ದಿ ವೇ ಫಾರ್ ವಿಕಸಿತ್ ಭಾರತ್ -ಒಂದು ರಾಷ್ಟ್ರ, ಒಂದು ಚುನಾವಣೆ: ವಿಕಸಿತ ಭಾರತಕ್ಕೆ ದಾರಿ ಮಾಡಿ ಕೊಡುವುದು ಎಂಬ ವಿಷಯದ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಬೇಕಿದ್ದು ಅತ್ಯುತ್ತಮವಾಗಿ ಮಂಡಿಸಲಾದ ಹತ್ತು ಸ್ಪರ್ಧಿಗಳ ಹೆಸರುಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗಾಗಿ ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುವುದು.
ಪ್ರಾಥಮಿಕ ಹಂತದಲ್ಲಿ ಒಂದು ನಿಮಿಷದ ವಿಡಿಯೋ ಅಪ್ಲೋಡ್ ಮಾಡಲು ಮಾರ್ಚ್ 9 ಕೊನೆಯ ದಿನಾಂಕವಾಗಿದ್ದು ವಿಜಯಪುರ ಬಾಗಲಕೋಟ ಜಿಲ್ಲಾ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾನಿಲಯಗಳಲ್ಲಿ, ಪದವಿ ಕಾಲೇಜುಗಳಲ್ಲಿ, ಶಿಕ್ಷಣ ಮಹಾವಿದ್ಯಾಲಯಗಳಲ್ಲಿ, ದೈಹಿಕ ಶಿಕ್ಷಣ ಕಾಲೇಜುಗಳಲ್ಲಿ, ಇಂಜಿನಿಯರಿಂಗ್, ನಸಿಂರ್ಗ್, ಡೆಂಟಲ್, ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿ ಸಮೂಹ ಹಾಗೂ ಯುವ ಸಮುದಾಯ ಭಾಗವಹಿಸುವ ಮೂಲಕ ವಿಚಾರಗಳನ್ನು ಮಂಡನೆ ಮಾಡಲು ಕಲ್ಪಿಸಲಾಗಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.