ಜಿಮ್ಸ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
ಗದಗ 14: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಿಮ್ಸ್ ನರ್ಸಿಂಗ್ ಮಹಾವಿದ್ಯಾಲಯ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು. ಸಮಾರಂಭ ಉದ್ಘಾಟಿಸಿದ ಡಾ. ಅರುಂಧತಿ ಕೆ ಇವರು ಮಾತನಾಡಿ ಜಾಗತಿಕವಾಗಿ ಹದಿಹರೆಯದ ವಿಧ್ಯಾರ್ಥಿಗಳು ಪರಸ್ಪರ ಆಕರ್ಷಣೆಯಿಂದ ಹಾಗೂ ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಯೌವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಯೌವನವನ್ನು ಸದುಪಯೋಗಪಡಿಸಿಕೊಳ್ಳಲು ಮಾನಸಿಕ ದೈಹಿಕ ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವೈಕ್ತಿಗಳಾಗಿ ಬೆಳೆಯಬೇಕೆಂದು ಕರೆ ನೀಡಿದರು. ಹೆಚ್.ಐ.ವಿ. ಏಡ್ಸ್ ಕುರಿತು ಮಾತನಾಡಿ ಹೆಚ್.ಐ.ವಿ. ನಾಲ್ಕು ಮಾರ್ಗದಿಂದ ಹರಡುತ್ತಿದ್ದು, ಆ ನಾಲ್ಕು ಮಾರ್ಗಗಳನ್ನು ಸುರಕ್ಷಿತ ಉಪಕರಣಗಳನ್ನು ಬಳಸುವ ಮೂಲಕ ಹೆಚ್.ಐ.ವಿ. ಇಂದ ದೂರ ಇರಬೇಕೆಂದು ವಿವರಿಸಿದರು. ಹೆಚ್.ಐ.ವಿ. ಸೋಂಕಿತರಿಗೆ ಶೇ. 10 ರಷ್ಟು ತೂಕ ಕಡಿಮೆಯಾಗುವುದು ಹಾಗೂ ನಿರಂತರ ಬೇಧಿಯಾಗುವುದು, ಚರ್ಮದ ಖಾಯಿಲೆಗಳು ಕಾಣಿಸಿಕೊಳ್ಳುವುದು ಹಾಗೂ ಅವಕಾಶವಾದಿ ಸೋಂಕುಗಳು ನಿರಂತರ ಜ್ವರ ಇದ್ದರೆ ಹೆಚ್.ಐ.ವಿ. ಸೋಂಕು ಇರಬಹುದೆಂದು ಶಂಕಿಸಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು. ಆರೋಗ್ಯ ಇಲಾಖೆಯ ಬಿ.ಬಿ. ಲಾಳಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ಥುತ ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದರು ಜಾತಿ, ಧರ್ಮ, ಲಿಂಗ ಗುಂಪು ಆಧಾರಿತ ಸವಾಲುಗಳನ್ನು ಎದುರುಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೆಂದು ತಿಳಿಸಿದರು. ವಿಶ್ವದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದು ಅವರು ಹೇಳುವಂತೆ ಪ್ರಯತ್ನವೆಂಬ ಚಂದ್ರನ್ನನ್ನು ಬೆಳಗಿಸಿದಂತೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ ಹಾಗೇಯೇ ಶ್ರಧ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳು ಇದರ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರೆ ವಿಜಯಲಕ್ಷ್ಮೀ ಒಲಿಯುತ್ತಾಳೆಂದು ತಿಳಿಸಿದರು. ನಂತರ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ಹೆಚ್.ಐ.ವಿ. ಏಡ್ಸ್ ಕುರಿತು ಬಿತ್ತಿಚಿತ್ರ ಸ್ಪರ್ಧೇಯಲ್ಲಿ ವಿಜೇತರಾದ ಜಿಮ್ಸ್ ನರ್ಸಿಂಗ್ ಕಾಲೇಜಿನ ಕು. ಸುದೀಪರೆಡ್ಡಿ ಹುಲ್ಲೂರ ಪ್ರಥಮ ಸ್ಥಾನ, ಕು. ಮಹಮದ್ ಸೋಹೆಲ್ ದ್ವೀತಿಯ ಸ್ಥಾನ, ಹಾಗೂ ಕು. ಅಶ್ವಿನಿ ಮತ್ತು ಕು. ಯಲ್ಲಮ್ಮ ತೃತೀಯ ಸ್ಥಾನಗಳಿಸಿದ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಜ್ಯೋತಿ ಕರಿಗೌಡರ ರವರು ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯವ್ವನವನ್ನು ಜೋಪಾನ ಮಾಡಿಕೊಳ್ಳಬೇಕೆಂದು ಹೇಳಿದರು. ಸಮಾರಂಭದಲ್ಲಿ ಜಿಮ್ಸ್ ನಿರ್ಸಂಗ್ ಕಾಲೇಜಿನ ಪ್ರಾದ್ಯಾಪಕರಾದ ಪ್ರೋ. ಶಿವನಗೌಡರ್, ಪ್ರೋ.ಉಷಾ, ಪ್ರೋ.ಶಾರದಾ, ಪ್ರೋ.ಶಿವರಾಜ, ಪ್ರೋ.ಸಂಜಯ ಹಾಗೂ ಇನ್ನಿತರ ಪ್ರ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕುಮಾರಿ ಲಕ್ಷ್ಮೀ ಜಾಧವ ಪಾರ್ಥಿಸಿದರು. ಬಿ.ಬಿ. ಲಾಳಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಪ್ರೋ.ಸ್ಟೇಫಿನ್ ಮುಖ್ಯಸ್ಥರು ಸಮುದಾಯ ವಿಭಾಗ ಇವರು ವಂದನಾರೆ್ಣ ಮಾಡಿದರು.