ಲೋಕದರ್ಶನ ವರದಿ
ಬೆಳಗಾವಿ, 12: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ಹಾಗೂ ಪದವಿ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯ ಮತ್ತು ಎನ್.ಎಸ್.ಎಸ್. ಘಟದಕ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಅಂಗವಾಗಿ "ರಾಷ್ಟ್ರೀಯ ಯುವ ದಿನಾಚರಣೆ"ಯನ್ನು ದಿ. 12ರಂದು ಬೆಳಿಗ್ಗೆ 11.00 ಗಂಟೆಗೆ ಸರ್ ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿಕೊಂಡಿದ್ದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಘ್ನೇಶ್ವರ ಡಿ. ಯಳಮಲಿ ಅವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕೇವಲ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಸ್ವಾಮಿ ವಿವೇಕಾನಂದರು ಯೋಗಗಳನ್ನು ಅಭ್ಯಾಸಮಾಡಿ ಜಗತ್ತಿಗೆ ತಮ್ಮದೆಯಾದ ಕೊಡುಗೆ ನೀಡಿದರು. ಸ್ವಾಮಿ ವಿವೇಕಾನಂದರ ದರ್ಶನದ ವೈಶಿಷ್ಟ್ಯವೆಂದರೆ ಅದು ಏಕತೆ-ವಿವಿಧತೆಗಳನ್ನು ಏಕಕಾಲದಲ್ಲಿ ಮಾನ್ಯ ಮಾಡುವಂಥದು. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಯುವಶಕ್ತಿಗೆ ಬೋಧಿಸುತ್ತಿದ್ದರು. ಯುವ ಜನತೆಯಲ್ಲಿ ಹುದುಗಿರುವ ಸುಪ್ತಶಕ್ತಿ ಮತ್ತು ಪ್ರತಿಭೆಯನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡಲ್ಲಿ ಬಲಿಷ್ಠರಾಷ್ಟ್ರ ನಿಮರ್ಾಣ ಸಾಧ್ಯವಾಗುತ್ತದೆ. ಯಾರು ಇತರಿಗಾಗಿ ಬದುಕುತ್ತಾರೋ ಅವರದ್ದು ಮಾತ್ರ ಜೀವನ, ಉಳಿದವರು ಇದ್ದೂ ಇಲ್ಲದಂತೆ ಎಂದು ಸ್ವಾಮಿ ವಿವೇಕಾನಂದರು ನುಡಿದಿದ್ದಾರೆ. ಇಂದಿನ ಯುವಜನತೆಯು ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು, ಆಧ್ಯಾತ್ಮಸಾಧನೆಗಳನ್ನು ತಿಳಿದುಕೊಂಡು ಪ್ರೇರಣೆ ಹೊಂದಿ ಮುನ್ನಡೆಯಬೇಕು ಎಂದು ಹಿತವಚನಗಳನ್ನು ನುಡಿದರು.
ಈ ಸಮಾರಂಭದಲ್ಲಿ ಪದವಿ ಪೂರ್ವ ಪ್ರಾಚಾರ್ಯ ಎಸ್.ಜಿ. ನಂಜಪ್ಪನವರ ಅವರು, ಪ್ರೊ.ಯು.ಆರ್. ರಜಪೂತ, ಪ್ರೊ. ಎಸ್.ಎಸ್. ಅಬ್ಬಾಯಿ, ಡಾ.(ಶ್ರೀಮತಿ) ಎಸ್.ಎನ್. ಬನಸೋಡೆ, ಡಾ.(ಶ್ರೀಮತಿ) ಜೆ.ಎಸ್. ಕವಳೇಕರ, ಪ್ರೊ. ಆರ್.ಆರ್. ವಡಗಾವಿ, ಪ್ರೊ. ಎಸ್.ಬಿ. ತಾರದಾಳೆ, ಪ್ರೊ. ಏಕಾಂತಯ್ಯ, ಸಿಬ್ಬಂಧಿವರ್ಗದವರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.