ಲೋಕದರ್ಶನ ವರದಿ
ಯಲಬುಗರ್ಾ: ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾಥರ್ಿಗಳು ಬೆಂಗಳೂರಿನ ಸನ್ ಪ್ಯಾಲೇಸ್ನಲ್ಲಿ ವಿವಿಧ ಸಂಘಟನೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆನೇಕಲ್, ಚೈತನ್ಯ ಯೋಗ ಕೇಂದ್ರ, ಅನಿತ ಫೌಂಢೆಷನ್ ಟ್ರಸ್ಟ್, ಇಂಟರ್ ನ್ಯಾಷನಲ್ ಪತಂಜಲಿ ಯೋಗ ಪೀಠ ಇವುಗಳ ಸಂಯುಕ್ತ ಆಶ್ರಯದಲಿ ಜರುಗಿದ 5 ನೇ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪಧರ್ೇಯಲ್ಲಿ ವಯೋಮಿತಿ 41 ರಿಂದ 50 ಒಳಗಿನ ಯೋಗ ಪಟುಗಳಿಗೆ ಏರ್ಪಡಿಸಿದ ಸ್ಪಧರ್ೇಯಲ್ಲಿ ಯಲಬುಗರ್ಾದ ಬಸವಲಿಂಗೇಶ್ವರ ಯೋಗ ಕೇಂದ್ರದ ಸಂಚಾಲಕ ಶರಣಬಸಪ್ಪ ಕೆ. ದಾನಕೈ ಇವರು ಭಾಗವಹಿಸಿ ರಾಷ್ಟ್ರಮಟ್ಟದ 4 ನೇ ಸ್ಥಾನವನ್ನು ಪಡೆದಿರುತ್ತಾರೆ, ಮತ್ತು ವಯೋಮಿತಿ 13 ರಿಂದ 16 ಒಳಗಿನ ಶಾಲಾ ವಿದ್ಯಾಥರ್ಿಗಳಿಗೆ ಏರ್ಪಡಿಸಿದ ಸ್ಪಧರ್ೇಯಲ್ಲಿ ಬಸವಲಿಂಗೇಶ್ವರ ಯೋಗ ಕೇಂದ್ರದ ವಿಧ್ಯಾಥರ್ಿ ಶ್ರೀಕಾಂತ ಕನಕೊಪ್ಪ 5ನೇ ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ಬಸವರಾಜ ರಾಂಪೂರ ಸಮದಾನಕರ ಬಹುಮಾನವನ್ನು ಪಡೆದುಕೊಂಡಿದರುವದಕ್ಕೆ ಯಲಬುಗರ್ಾದ ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾ ಸ್ವಾಮಿಜಿಯವರು ಹಾಗೂ ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾಥರ್ಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.