ದೇಶದಲ್ಲಿ ಟಿಕ್ ಟಾಕ್ ನಿಷೇಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಒತ್ತಾಯ

ನವದೆಹಲಿ, ಮೇ ೧೯,ಆಕ್ಷೇಪಾರ್ಹ ವಿಡಿಯೋಗಳ ಮೂಲಕ  ಯುವ ಜನಾಂಗದ  ಮೇಲೆ  ಟಿಕ್ ಟಾಕ್   ಕೆಟ್ಟ ಪರಿಣಾಮ  ಬೀರುತ್ತಿದೆ ಎಂದು  ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ   ಮಂಗಳವಾರ ತೀವ್ರ   ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ  ಟಿಕ್ ಟಾಕ್  ಅಪ್ಲಿಕೇಷನ್  ಅನ್ನು  ಸಂಪೂರ್ಣವಾಗಿ   ನಿಷೇಧಿಸಬೇಕು ಎಂದು ಕೋರಿ ಸದ್ಯದಲ್ಲಿಯೇ  ಕೇಂದ್ರ ಸರ್ಕಾರಕ್ಕೆ ಪತ್ರ  ಬರೆಯುವುದಾಗಿ  ಅವರು ತಿಳಿಸಿದ್ದಾರೆ.  ಸೋಷಿಯಲ್ ಮೀಡಿಯಾ ಅಪ್ಲಿಕೇಶನ್   ಟಿಕ್ ಟಾಕ್     ದೇಶದಲ್ಲಿ  ಹೆಚ್ಚಿನ ಯುವಜನರು ಬಳಸುತ್ತಾರೆ. ಹಿಂಸೆ  ಪ್ರಚೋದಿಸಲು, ತಮಾಷೆಗಾಗಿ  ಬಳಸುವ ಟಿಕ್‌ಟ್ಯಾಕ್ ದುರುಪಯೋಗವಾಗುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ವೀಡಿಯೊಗಳು, ಆಸಿಡ್ ದಾಳಿ  ಪ್ರಚೋದಿಸುವ ರೀತಿ  ಟಿಕ್ ಟಾಕ್ ನಲ್ಲಿ   ವಿಡಿಯೋ  ಬಿತ್ತರಿಸಲಾಗುತ್ತಿದೆ  ಎಂದು ಬಿಜೆಪಿ ನಾಯಕ ತಾಜಿಂದರ್ ಸಿಂಗ್ ಬಗ್ಗಾ  ಮಾಡಿದ ಟ್ವೀಟ್‌ಗೆ,  ರೇಖಾ ಶರ್ಮಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.ಟಿಕ್ ಟಾಕ್ ನಲ್ಲಿ  ಅಸಭ್ಯಕರ  ವಿಡಿಯೋ  ಪೋಸ್ಟ್ ಮಾಡುವುದರ ಜೊತೆಗೆ ಹಿಂಸೆಯನ್ನು ಪ್ರಚೋದಿಸಲಾಗುತ್ತಿದೆ ಎಂದು   ರೇಖಾ ಶರ್ಮ  ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ  ಟಿಕ್ ಟಾಕ್  ಅಪ್ಲಿಕೇಷನ್   ಅನ್ನು   ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿರುವುದಾಗಿ  ಅವರು  ತಿಳಿಸಿದ್ದಾರೆ.  ಅಸಿಡ್  ದಾಳಿಯನ್ನು ಪ್ರೋತ್ಸಾಹಿಸುವ ರೀತಿ  ಟಿಕ್ ಟಾಕ್   ಸೃಷ್ಟಿಸಿ  ಎಂಬ ವ್ಯಕ್ತಿ  ಫೈಜಲ್ ಸಿದ್ದಿಖಿ    ವಿಡಿಯೋ ಮಾಡಿದ್ದಾರೆ. ಈತ ೧೩.೪  ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು  ಹೊಂದಿದ್ದಾನೆ.   ಇಂತಹ  ಆಕ್ಷೇಪಾರ್ಹ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಮಾಜದ ಮೇಲೆ  ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಆತನ ವಿರುದ್ದ  ಕೂಡಲೇ  ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಮಹಾರಾಷ್ಟ್ರ  ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.  ಫೈಜಲ್  ಮಾಡಿರುವ ಪೋಸ್ಟ್ ಅನ್ನು ಕೂಡಲೇ ತೊಲಗಿಸಬೇಕು ಎಂದು  ಆಯೋಗ  ಒತ್ತಾಯಿಸಿದೆ.