ಧಾರವಾಡ 24 : ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡು ಮತದಾರರ ದಿನದ ಪ್ರತಿಜ್ಞೆ ಸ್ವೀಕರಿಸಿದರು.
ತಮ್ಮ ಅಧೀನ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇ ಶಕ ಡಾ. ಬಿ.ಕೆ.ಎಸ್. ವರ್ಧನ್ ಅವರು, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು, ಜೊತೆಗೆ ಪ್ರತಿಯೊಂದೂ ಚುನಾವಣೆಗಳಲ್ಲಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ, ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ನಿರ್ಭಿತಿಯಿಂದ ಮತ ಚಲಾಯಿಸುತ್ತೇವೆಂದು ಭಾರತದ ಪ್ರಜೆಗಳೆಲ್ಲರೂ ಪ್ರತಿಜ್ಞೆಗೈಯುವ ಅಗತ್ಯವಿದೆ ಎಂದರು.
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅನುಷ್ಠಾನಗೊಂಡ ದಿನದಿಂದ ಅಂದರೆ 1950 ಜನವರಿ 26 ರಿಂದ ಮತದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಉಂಟಾಗಿದ್ದು, ಈ ಸಂಖ್ಯಾಬಲವು ಮೌಲ್ಯಾಧಾರಿತವಾದ ಬಲಿಷ್ಠ ಭಾರತದ ನಿರ್ಮಾ ಣದಲ್ಲಿ ಸದುಪಯೋಗವಾಗಬೇಕಿದೆ. 'ಒನ್ ಮ್ಯಾನ್, ಒನ್ ಓಟ್, ಒನ್ ವ್ಯಾಲ್ಯೂ ಎಂದು ವಿಶ್ಲೇಷಿಸುವ ಪ್ರಜಾಪ್ರಭುತ್ವ ಸಿದ್ಧಾಂತಗಳು ಯಶಸ್ವಿಯಾಗಲು ಅರ್ಹ ಮತದಾರರೆಲ್ಲರೂ ಮತದಾನ ಮಾಡಬೇಕು ಎಂದೂ ಡಾ.ವರ್ಧನ್ ಹೇಳಿದರು.
ಇಲಾಖೆಯ ಪ್ರಭಾರಿ ಜಂಟಿ ನಿರ್ದೇ ಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇ ಶಕ ಆರ್.ಎಸ್. ಮುಳ್ಳೂರ, ಸಾರ್ವಜನಿಕ ಸಂಪರ್ಕಾ ಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇ ಶಕ ಅರ್ಜು ನ ಕಂಬೋಗಿ, ಸಹಾಯಕ ನಿರ್ದೇ ಶಕರುಗಳಾದ ವ್ಹಿ. ಜಿ. ಬದಾಮಿ ಹಾಗೂ ಕೆ. ಪ್ರಕಾಶ್, ಕಚೇರಿ ಅಧೀಕ್ಷಕರು ಹಾಗೂ ಇತರೇ ಲಿಪಿಕ ನೌಕರರು ಇದ್ದರು.