ಹಾವೇರಿ 31: ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಜಿ. ಹೆಚ್. ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕಗಳ 1 ಮತ್ತು 2 ರ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹ ದಿವಸವನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಮ್. ಎಸ್. ಯರಗೋಪ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಪ. ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ,ಪ್ರೊ. ಡಿ. ಎ. ಕೊಲ್ಹಾಪುರೆ ಡಾ. ವಾಸುದೇವ ನಾಯ್ಕ, ಡಾ. ಎಸ್. ವಿ. ಮಡಿವಾಳೆ ಉಪಸ್ಥಿತರಿದ್ದರು. ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರೊ. ರಮೇಶ ನಾಯಕ್, ಪ್ರೊ. ಎಸ್. ಎಸ್. ಸಣ್ಣಶಿವಣ್ಣನವರ ಹಾಗೂ ಸುಮಾರು 200 ಕ್ಕೂ ಮಿಕ್ಕಿದ ಎನ್ ಎಸ್ ಎಸ್ ಸ್ವಯಂಸೇವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.