ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ: ವಯಸ್ಕರ ಬಿ.ಸಿ.ಜಿ. ಲಸಿಕಾಕರಣಕ್ಕೆ ಚಾಲನೆ

National Tuberculosis Eradication Program: Adult BCG Vaccination Launched

ಬೆಳಗಾವಿ,ಮಾ.28 : ಕ್ಷಯರೋಗ ನಿರ್ಮೂಲನೆಯಲ್ಲಿ  ಲಸಿಕಾಕರಣವು ಪ್ರಮುಖವಾದ ಪಾತ್ರವನ್ನು  ನಿರ್ವಹಿಸಲಿದ್ದು ದುರ್ಬಲ ವರ್ಗದ ಜನರಾದ  60 ವರ್ಷ ಮೇಲ್ಪಟ್ಟವರು, ಮಧುಮೇಹದಿಂದ ಬಳಲುತ್ತಿರುವವರು, ಧೂಮಪಾನ ಹಾಗೂ ಮಧ್ಯ ವ್ಯೆಸನಿಗಳು, ಅಪೌಷ್ಠಿಕತೆಯಿಂದ ಬಳಲುತ್ತಿರುವವರು (<18 ಬಿ.ಎಂ.ಐ), ಕ್ಷಯರೋಗಿಗಳ ಸಂಪರ್ಕಿತರು ವಯಸ್ಕರ ಬಿ.ಸಿ.ಜಿ. ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ. ಪಿ. ಗಡಾದ ಅವರು ಕರೆ ನೀಡಿದರು. 

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯರೋಗ ನಿಯಂತ್ರಣ ವಿಭಾಗ, ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ಹಿಂಡಾಲ್ಕೋ ಇಂಡಸ್ಟ್ರೀಜ್ ಪೈ. ಲಿಮಿಟೆಡ್, ತಾಲೂಕಾ ಕ್ಷಯರೋಗ ಘಟಕ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯವರ ಸಭಾಂಗಣದಲ್ಲಿ ಶುಕ್ರವಾರ (ಮಾ.28) ರಂದು ಬೆಳಿಗ್ಗೆ 11.30 ಗಂಟೆಗೆ ಆಯೋಜಿಸಿದ್ದ ವಯಸ್ಕರ ಬಿ.ಸಿ.ಜಿ. ಲಸಿಕಾಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

“ಹೌದು ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು”: (ಬದ್ಧತೆ, ಹೂಡಿಕೆ, ವಿತರಣೆ) ್ಲ "ಙ! ಘಜ ಅಚಿಟಿ ಇಟಿಜ ಖಿಃ: ಅಠಟಣ, ಋತಣ, ಆಜಟತಜಡಿ"್ವ ಎಂಬ ಘೋಷಣೆಯನ್ನು ಡಾ. ಗಡಾದ ಅವರು ಹೇಳಿದರು. 

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಾಂದಿನಿ ದೇವಡಿ ಮಾತನಾಡಿ ವಯಸ್ಕರ ಬಿಸಿಜಿ ಲಸಿಕಾಕರಣದ ಕುರಿತು ವಿವರಿಸುತ್ತಾ ಇದೊಂದು ಅಧ್ಯಯನ ಕಾರ್ಯಕ್ರಮವಾಗಿದ್ದು, ಭಾರತಾದ್ಯಂತ ಆಯ್ದ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ನಡೆದಿದ್ದು, ಈಗ ಕರ್ನಾಟಕ ರಾಜ್ಯದ 10 ಜಿಲ್ಲೆಗಳನ್ನು  ಸಂಶೋಧನಾತ್ಮಕ (ಋಣಜಡಿತಟಿಣಠ) ಜಿಲ್ಲೆಗಳೆಂದು ಅನುಮೋದಿಸಿ ವಿಸ್ತರಿಸಿದ್ದು ಅದರಲ್ಲಿ ಬೆಳಗಾವಿ ಜಿಲ್ಲೆಯು ಸಹ ಒಂದಾಗಿದೆ ಎಂದು ವಿವರಿಸಿದರು.  

ದುರ್ಬಲ ವರ್ಗದ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ವಯಸ್ಕರ ಬಿಸಿಜಿ ಲಸಿಕೆಯನ್ನು ಪ್ರಾರಂಭಿಸಬೇಕಾಗಿದ್ದು ಸದರಿ ಸಮಿಕ್ಷೆಗೆ ಆರ್‌.ಸಿ.ಹೆಚ್‌. ಕಾರ್ಯಕ್ರಮದ ಸಹಯೋಗದೊಂದಿಗೆ ನಿಯಮಿತ ಲಸಿಕಾಕರಣ ಚಟುವಟಿಕೆಗಳೊಂದಿಗೆ ವಯಸ್ಕರ ಬಿಸಿಜಿ ಲಸಿಕಾಕರಣ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ ಎಂದು ತಿಳಿಸಿದರು. 

ಬೆಳಗಾವಿ ವಿಭಾಗದ ಡಬ್ಲೂ.ಹೆಚ್‌.ಓ ಸಲಹೆಗಾರರು (ಕ್ಷಯ) ಡಾ. ಸತೀಶ ಘಾಟಗೆ ಮಾತನಾಡಿ ಕ್ಷಯರೋಗ ನಿರ್ಮೂಲನೆಯಲ್ಲಿ ಓಷಧಿ ಹಾಗೂ ಆರೈಕೆಯ ಜೊತೆಗೆ ಕುಟುಂಬದ ಸಹಯೋಗ ಅತೀ ಅವಶ್ಯವಿದ್ದು, ಕ್ಷಯರೋಗದಿಂದ ಆಗಬಹುದಾದ ಸೋಂಕನ್ನು ತಡೆಗಟ್ಟುವಲ್ಲಿ ವಯಸ್ಕರ ಬಿ.ಸಿ.ಜಿ. ಲಸಿಕಾಕರಣವು ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದ್ದು ಎಲ್ಲಾ ಕ್ಷಯರೋಗದ ಫಲಾನುಭವಿಗಳು ಹಾಗೂ ಸಂಘ ಸಂಸ್ಥೆಗಳು ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಿ ಎಲ್ಲರೂ ಈ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 60 ಫಲಾನುಭವಿಗಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಸವೇಕ್ಷಣಾಧಿಕಾರಿಗಳು ಡಾ. ಸಂಜಯ ದೊಡಮನಿ, ಬೆಳಗಾವಿ ವಿಭಾಗದ ಡಬ್ಲೂ.ಹೆಚ್‌.ಓ ಸಲಹೆಗಾರರು (ಕ್ಷಯ) ಡಾ. ಸತೀಶ ಘಾಟಗೆ, ಸ್ಥಳಿಯ ವೈದ್ಯಾಧಿಕಾರಿಗಳು ಡಾ. ಜೋಸ್ಸನಾ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಮೇಶ ದಂಡಗಿ, ಡಿಟಿಸಿ ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಬಿ. ಎನ್‌. ತುಕ್ಕಾರ, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಆಸ್ಪತ್ರೆಗಳ ವೈದ್ಯಾಧಿಕರಿಗಳು, ಹಾಗೂ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.