ಲೋಕದರ್ಶನ ವರದಿ
ಗೋಕಾಕ 12: ನಗರದ ಕೆ.ಎಲ್.ಇ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆ.ಸಿ.ಐ. ಗೋಕಾಕ ಘಟಕದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ಪ್ರಾಮಾಣಿಕ ಅಂಗಡಿಯನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತಾ ವಾಣಿಯನ್ನು ಬೋಧಿಸಲಾಯಿತು. ನಂತರ ಮಕ್ಕಳಲ್ಲಿ ಪ್ರಮಾಣಿಕತೆಯನ್ನು ಬೆಳೆಸಲು ಜೆಸಿಐ ಇಂಡಿಯಾವು ಈ ವರ್ಷ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಈ ಸಂದರ್ಭದಲ್ಲಿ ಕೆ.ಎಲ್.ಇ. ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಅನುಪಮಾ ಕೌಶಿಕ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರರಾದ ಆಯ್.ಎಮ್.ದಫೇದಾರರವರು ಹಾನೆಸ್ಟಿ ಶಾಪ್ನ ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಹಾನೆಸ್ಟಿ ಶಾಪ್ (ಪ್ರಾಮಾಣಿಕ ಅಂಗಡಿ)ಯಲ್ಲಿ ಮಕ್ಕಳು ತಮಗೆ ಬೇಕಾದ ವಸ್ತುಗಳ ಮೇಲೆ ನಮೂದಿಸಿದ ಬೆಲೆಯ ದರವನ್ನು ಪ್ರಾಮಾಣಿಕವಾಗಿ ಇಟ್ಟು ಖರೀದಿಸಿದರು. ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ಅಧ್ಯಕ್ಷರಾದ ಜೆಸಿ. ರಜನಿಕಾಂತ ಮಾಳೋದೆ ಹಾಗೂ ಕಾರ್ಯದರ್ಶಿ ಯಾದ ಜೆಸಿ. ಶೇಖರ ಉಳ್ಳೇಗಡ್ಡಿ, ಪೂರ್ವ ರಾಷ್ಟ್ರೀಯ ಸಂಯೋಜಕರಾದ ಜೆಸಿ. ವಿಷ್ಣು ಲಾತೂರ, ಪೂರ್ವ ವಲಯ ನಿರ್ಧೆಶಕರಾದ ಜೆಸಿ. ಕೆಂಪಣ್ಣಾ ಚಿಂಚಲಿ, ಪೂರ್ವಾಧ್ಯಕ್ಷರಾದ ಜೆಸಿ. ಗುರುರಾಜ ನಿಡೋಣಿ, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ. ಮೀನಾಕ್ಷಿ ಸವದಿ, ಜೆಸಿಐ ಸದಸ್ಯರಾದ ಜೆಸಿ. ರವಿ ಮಾಲದಿನ್ನಿ, ಜೆಸಿ. ಚಂದ್ರಶೇಖರ ಕಡೇವಾಡಿ, ಜೆಸಿ. ಪ್ರಕಾಶ ಬಿಳ್ಳೂರ, ಜೆಸಿ. ರಮೇಶ ಕೋಸಂದಲ, ಜೆಸಿ. ಭಾಗೀರಥಿ ನಂದಗಾಂವಿ, ಜೆಸಿ. ರಾಚಪ್ಪ ಅಮ್ಮಣಗಿ ಹಾಗೂ ಸಂತೋಷ ಮಿರ್ಜೆ, ಬಸವರಾಜ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.