ಬಾಗಲಕೋಟ06: ನಗರದ ಬಿ.ವ್ಹಿ.ವ್ಹಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಇತಿಹಾಸ ವಿಭಾಗ ಹಾಗೂ ಕನರ್ಾಟಕ ಸಕರ್ಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಇವುಗಳ ಸಹಯೋಗದಲ್ಲಿ 'ಬಾಗಲಕೋಟೆ ಪ್ರದೇಶದ ದೇಶಗತಿ ಮನೆತನಗಳು ಮತ್ತು ಸಮಕಾಲೀನ ಮಠ ಮಾನ್ಯಗಳು' ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಶನಿವಾರ ಫೆ. 08-ರಂದು ಹಮ್ಮಿಕೊಳ್ಳಲಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಉಪಕುಲಪತಿಗಳಾದ ಪ್ರೊ. ಎಮ್. ರಾಮಚಂದ್ರೇಗೌಡ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿ.ವ್ಹಿ.ವ್ಹಿ.ಸಂಘದ ಕಾಯರ್ಾಧ್ಯಕ್ಷರು ಹಾಗೂ ಶಾಸಕರಾದ ಡಾ.ವೀರಣ್ಣ ಸಿ. ಚರಂತಿಮಠ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಶ್ರೀ ವೆಂಕಟೇಶ ಆಗಮಿಸಲಿದ್ದಾರೆ.
ಡಾ.ಆರ್.ಎಮ್.ಷಡಕ್ಷರಯ್ಯ ಖ್ಯಾತ ಇತಿಹಾಸ ತಜ್ಞರು, ನಿವೃತ್ತ ನಿದರ್ೇಶಕರು ಕನ್ನಡ ಸಂಶೋಧನ ಸಂಸ್ಥೆ, ಕ.ವಿ.ವಿ. ಧಾರವಾಡ ಆಶಯ ನುಡಿ. ಶ್ರೀ ಮಹೇಶ ಎನ್. ಅಥಣಿ ಗೌರವ ಕಾರ್ಯದಶರ್ಿಗಳು ಹಾಗೂ ಶ್ರೀ ಅಶೋಕ ಎಂ. ಸಜ್ಜನ (ಬೇವೂರ) ಕಾಯರ್ಾಧ್ಯಕ್ಷರು, ಕಾಲೇಜುಗಳ ಆಡಳಿತ ಮಂಡಳಿ, ಬಿ.ವ್ಹಿ.ವ್ಹಿ.ಸಂಘ ಬಾಗಲಕೋಟ ಇವರು ಉಪಸ್ಥಿತರಿರುವರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆ ಒಳಗೊಂಡಂತೆ ರಾಜ್ಯ ಹಾಗೂ ಇತರೆ ರಾಜ್ಯಗಳ ಮಹಾವಿದ್ಯಾಲಯಗಳ ಸುಮಾರು 150 ಅಧ್ಯಾಪಕರು, 100 ವಿದ್ಯಾಥರ್ಿಗಳು ಹಾಗೂ 18 ಜನ ಸಂಪನ್ಮೂಲ ವ್ಯಕ್ತಿಗಳು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಸಭಾವನದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, 12 ರಿಂದ ಸಂಜೆ 4ರ ವರಗೆ ಸಭಾಭವನ, ಸೆಮಿನಾರ್ ಹಾಲ್ ಹಾಗೂ ಕೊಠಡಿ ಸಂಖ್ಯೆ 4 ರಲ್ಲಿ ಹೀಗೆ ಮೂರು ಕಡೆಗಳಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ.
ಸಂಜೆ 4.30 ಕ್ಕೆ ಜರುಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಶೋಕ ಎಂ. ಸಜ್ಜನ (ಬೇವೂರ) ಕಾಯರ್ಾಧ್ಯಕ್ಷರು, ಕಾಲೇಜುಗಳ ಆಡಳಿತ ಮಂಡಳಿ, ಬಿ.ವ್ಹಿ.ವ್ಹಿ.ಸಂಘ ಬಾಗಲಕೋಟ ವಹಿಸುವರು.
ಡಾ.ಆರ್.ಎಮ್.ಷಡಕ್ಷರಯ್ಯ ಖ್ಯಾತ ಇತಿಹಾಸ ತಜ್ಞರು, ನಿವೃತ್ತ ನಿದರ್ೇಶಕರು ಕನ್ನಡ ಸಂಶೋಧನ ಸಂಸ್ಥೆ, ಕ.ವಿ.ವಿ. ಧಾರವಾಡ ಡಾ. ಶೀಲಾಧರ ಮುಗಳಿ ಮುಖ್ಯಸ್ಥರು ಇತಿಹಾಸ ಮತ್ತು ಪುರಾತತ್ವ ವಿಭಾಗ ಕ.ವಿ.ವಿ. ಧಾರವಾಡ ಉಪಸ್ಥಿತರಿರುವರು.
ಕಾಲೇಜುಗಳ ಆಡಳಿತ ಮಂಡಳಿ ಕಾಯರ್ಾಧ್ಯಕ್ಷರಾದ ಶ್ರೀ ಅಶೋಕ ಎಂ. ಸಜ್ಜನ (ಬೇವೂರ) ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಎಸ್.ಕಟಗಿಹಳ್ಳಿಮಠ, ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಬಿ.ಆರ್.ಪಾಟೀಲ ಹಾಗೂ ಸಂಘಟನಾ ಕಾರ್ಯದಶರ್ಿ ಡಾ.ಎಸ್.ಎನ್.ರಾಂಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.