ಮಾ 21 ರಿಂದ 27 ರವರೆಗೆ ‘ರಾಷ್ಟ್ರೀಯ ಭಾವೈಕ್ಯೆತಾ ಶಿಬಿರ

National Solidarity Camp from March 21 to 27

ಮಾ 21 ರಿಂದ 27 ರವರೆಗೆ ‘ರಾಷ್ಟ್ರೀಯ ಭಾವೈಕ್ಯೆತಾ ಶಿಬಿರ  

ವಿಜಯಪುರ 20: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌.ಎಸ್‌.ಎಸ್ ಕೋಶದ ವತಿಯಿಂದ ಇದೇ. ಮಾ 21 ರಿಂದ 27 ರವರೆಗೆ ‘ರಾಷ್ಟ್ರೀಯ ಭಾವೈಕ್ಯೆತಾ ಶಿಬಿರ-2025’ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಕರ್ನಾಟಕ ರಾಜ್ಯ ಎನ್‌.ಎಸ್‌.ಎಸ್ ಸಲಹಾ ಸಮಿತಿ ಸದಸ್ಯ ಡಾ.ಜಾವೀದ ಜಮಾದಾರ, ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ ಹಾಗೂ ಯುಸುಫ್ ಕೋತ್ತಲ್ ಸ್ವಯಂ ಸೇವಯಕಿಯರಿಗಾಗಿ ಟಿ-ಶರ್ಟಗಳನ್ನು ಬಿಡುಗಡೆ ಮಾಡಿದರು. ದೇಶದ ವಿವಿಧ ರಾಜ್ಯಗಳಿಂದ ಎನ್‌.ಎಸ್‌.ಎಸ್ ಸ್ವಯಂ ಸೇವಕಿಯರು ಆಗಮಿಸುತ್ತಿದ್ದು, ಈಗಾಗಲೇ ತಮಿಳುನಾಡು, ಮಧ್ಯಪ್ರದೇಶ, ಕೇರಳಾ, ತೇಲಂಗಾನ, ಮಹಾರಾಷ್ಟ್ರ, ರಾಜ್ಯದ ತಂಡಗಳು ವಿಜಯಪುರ ತಲುಪಿದ್ದು, ಸಾಂಸ್ಕೃತಿಕ, ಸಾಮಾಜಿಕ, ಭಾಷಾಸಮಗ್ರತೆ, ರಾಷ್ಟ್ರೀಯ ಏಕತೆ, ಶ್ರಮದಾನ, ಜಿಲ್ಲೆಯ ಮತ್ತು ರಾಜ್ಯದ ಕಲೆ ಮತ್ತು ಸಾಂಸ್ಕ್ರತಿಕ ವಿನಿಮಯ, ವಿಜಯಪುರ ಜಿಲ್ಲೆಯ ಸ್ಮಾರಕಗಳ ದರ್ಶನ, ಗ್ರಾಮೀಣ ಭಾಗದ ಬದುಕು ಇಲ್ಲಿನ ಯುವಕ ಯುವತಿಯರ ಸಂವಹನ ಹಾಗೂ ಸ್ಥಳೀಯ ಕಲಾವಿದರ ಜೊತೆಗೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.