ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

National Service Scheme Annual Special Camp

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 

ಧಾರವಾಡ, 27; ಕೆಇ ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಧಾರವಾಡ ಜಿಲ್ಲಾ ಪಂಚಾಯತ್ ಧಾರವಾಡ ತಾಲೂಕ್ ಪಂಚಾಯತ್ ಧಾರವಾಡ ಹಾಗೂ ಗ್ರಾಮ ಪಂಚಾಯತ್ ಕೊಡಕಲಕಟ್ಟಿ ಇವರುಗಳ ಸಂಯುಕ್ತಾಕ್ಷರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024 25 ದಿನಾಂಕ 17.3.2025 ರಿಂದ 23.03.2025 ರವರೆಗೆ ಪುಡಕಲಕಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು ಈ ಸಮಾರಂಭದ ಉದ್ಘಾಟನೆಯನ್ನು ದಿವ್ಯ ಸಾನಿಧ್ಯ ಶ್ರೀ ಸದ್ಗುರು ಸಮರ್ಥ ಶಿವಾನಂದರು ಮನಿಹಾಳ ಸುರೇಬಾನ್ ಇವರು ವಹಿಸಿದ್ದರು. 

ನೇತ್ರಾವತಿ ಸುರೇಶ್ ಬುಡರಕಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಪುಡುಕಲಕಟ್ಟಿ ಮತ್ತು ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಸಸಿಗೆ ನೀರನ್ನು ಹಾಕುವದರ ಮುಖಾಂತರವಾಗಿ ಸಮಾರಂಭವನ್ನು ಉದ್ಘಾಟಿಸಿದರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸದ್ಗುರು ಸಮರ್ಥ ಶಿವಾನಂದರು ವಿದ್ಯಾರ್ಥಿಗಳು ನಿಮ್ಮ ಆಂತರಿಕ ಸ್ವಚ್ಛತೆಯ ಜೊತೆಗೆ ಬಾಹ್ಯ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಧ್ಯಾತ್ಮಿಕ ಉಪಾನ್ಯಾಸಗಳನ್ನು ಕಲಿಯುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನ ಹೇಳಿದರು. 

 ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಬುಡರಕಟ್ಟಿ ಅವರು ಮಾತನಾಡುತ್ತಾ ತಮ್ಮ ಗ್ರಾಮಕ್ಕೆ ಆಗಮಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಶುಭ ಕೋರಿ ದರು. ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಎಂ.ಎ. ಸಿದ್ಧಾಂತಿ ಅವರು ಮಾತನಾಡುತ್ತಾ ಎನ್‌.ಎಸ್‌.ಎಸ್‌. ಕಾರ್ಯಕ್ರಮದ  ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಪ್ರಾರ್ಥನೆಯನ್ನು ಸಕ್ಕೂಬಾಯಿ ತಡಸ? ಪ್ರಾಸ್ತಾವಿಕ ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ಎನ್ .ಎಸ್‌. ಎಸ್ ಕಾರ್ಯಕ್ರಮಾ ಅಧಿಕಾರಿಗಳಾದ ಈಶ್ವರ ರಾವ್ ಕರಾತ್ ಹಾಗೂ ಎಸ್ ಎ ಗಾಣಿಗೇರ್ ನಡೆಸಿಕೊಟ್ಟರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರೆ​‍್ಣಯನ್ನು ಸುನಿತಾ ಸತ್ಯಣ್ಣವರ್ ನೆರವೇರಿಸಿದರು. ಈ ಶಿಬಿರವು ಒಂದು ವಾರಗಳ ಕಾಲ ನಡೆದಿದ್ದು ಪ್ರತಿ ದಿನ  ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತಿಳಿಸಿಕೊಡುತ್ತಿದ್ದರು. ಅಲ್ಲದೇ ಈ ಶಿಬಿರದಲ್ಲಿ ಎಂ.ಎಂ .ಜೋಷಿ ಕಣ್ಣಿನ ಆಸ್ಪತ್ರೆ ಧಾರವಾಡ ಹಾಗೂ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರಿ​‍್ಡಸಲಾಗಿತ್ತು .ಈ ಕಾರ್ಯಕ್ರಮದಲ್ಲಿ ಸುಮಾರು 116ಕ್ಕಿಂತ ಹೆಚ್ಚು ಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಷಣೆಯನ್ನ ನಡೆಸಲಾಯಿತು. ಹಾಗೂ ಕಣ್ಣಿನ ಮಹತ್ವದ ಬಗ್ಗೆ ಪರಿಚಯವನ್ನು ಮಾಡಿಕೊಡಲಾಯಿತು. ಅಲ್ಲದೆ ಈ ವಿಶೇಷ ಶಿಬಿರದಲ್ಲಿ ರೋಟರಿ ಕ್ಲಬ್ ಧಾರವಾಡ ಹಾಗೂ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಿಳಾ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮಕ್ಕೆ ಡಾ. ಸವಿತಾ ಉಪನಾಳ ಅವರು ಆಗಮಿಸಿದ್ದು ಇವರುಗಳು ಮಹಿಳೆಯರಿಗೆ ಆಗುವ ತೊಂದರೆಗಳು ಹಾಗೂ ನಿವಾರಣೋಪಾಯಗಳ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟರು. ಮತ್ತೊಂದು ವಿಶೇಷತೆ ಎಂದರೆ  ದ್ವಜಾರೋಹಣ ಕಾರ್ಯಕ್ರಮಕ್ಕೆ ಗ್ರಾಮದ ಮಾಜಿ ಸೇನಾಧಿಕಾರಿಗಳನ್ನು ಕರೆಸಿ ಧ್ವಜಾರೋಹಣವನ್ನು ನೆರವೇರಿಸಿದ್ದಲ್ಲದೆ ಅವರ ಅನುಭವಗಳ ಬಗ್ಗೆ ಮಾಹಿತಿಯನ್ನ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. 

 ಪ್ರತಿದಿನ ಸಂಜೆ ಶಿಭಿರಾರ್ಥಿಗಳಿಂದ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರಿ​‍್ಡಸಲಾಗುತ್ತಿತ್ತು. ಸಮಾರೋಪ ಸಮಾರಂಭದಲ್ಲಿ ಗ್ರಾಮದ ಪ್ರಮುಖ ಹಿರಿಯರು ಮಹಾವಿದ್ಯಾಲಯದ ಸಿಬ್ಬಂದಿಗಳನ್ನು ಸತ್ಕರಿಸಿದರು. ಈ ಶಿಬಿರದಲ್ಲಿ ಪುಡಕಲಕಟ್ಟಿ ಗ್ರಾಮದ ಸಮಸ್ತ ಗುರು ಹಿರಿಯರು ಹಾಗೂ ಎಸ್‌. ಡಿ .ಎಂ .ಸಿ ಸರ್ವ ಸದಸ್ಯರು ?ಕೆ. ಇ .ಬೋರ್ಡಿನ ಆಡಳಿತ ಮಂಡಳಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು. ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.