ಲೋಕದರ್ಶನವರದಿ
ರಾಣೇಬೆನ್ನೂರು: ಕಾಡುನಾಶದಿಂದ ಪ್ರಕೃತಿ ನಾಶವಾಗುತ್ತಿದ್ದು ಮನುಷ್ಯನ ದುರಾಸೆಯಿಂದ ಬೆಟ್ಟಗುಡ್ಡಗಳನ್ನು ಕಡಿದು ಪ್ರಕೃತಿಯನ್ನು ಹಾಳುಮಾಡುತ್ತಿರುವ ಫಲವಾಗಿ ವಾತಾವರಣ ಕಲುಶಿತಗೊಂಡು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಯೋಜನಾಧಿಕಾರಿ ಹೆಚ್.ಶಿವಾನಂದ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿಯ ಸದ್ಗುರು ಶಿವಾನಂದ ಪಪೂ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾಷರ್ಿಕ ಶಿಬಿರದ 4ನೇ ದಿನದ ಶ್ರಮಾದಾನದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿವೃಷ್ಟಿಗೆ ಹವಾಮಾನದ ವೈಪರಿತ್ಯಗೆ ಮನುಷ್ಯನೇ ಕಾರಣ ಏಕೆಂದರೆ ವರ್ಷದಲ್ಲಿ ಸಾಕಷ್ಟು ಅರಣ್ಯ ನಾಶ ಮಾಡುತ್ತಿರುವುದರಿಂದ ಜೀವ ಸಂಕುಲಕ್ಕೆ ಹಾನಿಯುಂಟಾಗುತ್ತದೆ ಎಂದರು.
ಗ್ರಾಪಂ ಪಿಡಿಓ ಕವಿತಾ ಬೆಟ್ಟಾಳ ಮಾತನಾಡಿ, ವಿದ್ಯಾಥರ್ಿಗಳಲ್ಲಿ ಪರಿಸರದ ಸಂರಕ್ಷಣೆಯ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸಿದಾಗ ಮಾತ್ರ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಗ್ರಾಪಂ ಉಪಾಧ್ಯಕ್ಷ ಮಾದೇಗೌಡ ಜಾಪಾಳಿ, ಶಂಕರಗೌಡ ಕುಸಗೂರು ಮಂಜಣ್ಣ ಲಿಂಗದಹಳ್ಳಿ, ಬಿ.ವಿ.ಕುಡುಪಲಿ, ಶಿವಾನಂದ ಕೆಳಗಿನಮನಿ, ಕರೆಗೌಡ ಪೋಲಿಸಗೌಡ, ಜಿ.ಬಿ.ಬೆಳವಿಗಿ, ಬಿ.ಎಸ್.ನಾರಜ್ಜಿ, ಚನ್ನಬಸಪ್ಪ ಸಂಗಣ್ಣನವರ, ಶಕ್ತಿ ಸರ್ವದೆ ಸೇರಿದಂತೆ ಮತ್ತಿತರರು ಇದ್ದರು.