ರಾಷ್ಟ್ರೀಯ ಸೇವಾ ಯೋಜನೆ ಒಂದು ಸಾಮಾಜಿಕ ಕಾರ್ಯ : ದೊಡಮನಿ

ಮಹಾಲಿಂಗಪುರ: ರಾಷ್ಟ್ರೀಯ ಸೇವಾ ಯೋಜನೆ ಒಂದು ಸಮಾಜ ಸೇವೆಯಾಗಿದ್ದು, ಈ ಒಂದು ಕಾರ್ಯವನ್ನು ಶ್ರದ್ಧೆ, ನಿಷ್ಠುರದಿಂದ ಮಾಡಿದಾಗ ಮಾತ್ತ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಸಾಧ್ಯ ಮದಭಾಂವಿ ಗ್ರಾಪಂ ಅಧ್ಯಕ್ಷ ಗಣಪತಿ ದೊಡಮನಿ ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ  ಸಮೀಪದ ಮದಭಾಂವಿ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು  ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬೇಕು ಎಂದರು. 

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಮಾತನಾಡಿ ಶಿಬಿರದ ಯಶಸ್ವಿಗೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ವಿದ್ಯಾರ್ಥಿಗಳು  ಶ್ರಮದಾನ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಚತೆ ಮತ್ತು ಆರೋಗ್ಯದ ಅರಿವು ಮೂಡಿಸಬೇಕು. ರೈತರು ಸಹ ವಿಭಿನ್ನ ಬೆಳೆಗಳನ್ನು ಬೆಳೆಯುವ ಮೂಲಕ ಆಥರ್ಿಕ ಅಭಿವೃದ್ಧಿ ಹೊಂದಬೇಕು ಎಂದರು.

ಎನ್.ಎಸ್.ಎಸ್ ಅಧಿಕಾರಿಗಳಾದ ವಿ.ಎಸ್.ಅಂಗಡಿ, ಎ.ಎಂ.ಉಗಾರೆ, ಪಿಎಲ್ಡಿ ಬ್ಯಾಂಕ ನಿದರ್ೇಶಕ ಎಂ.ಬಿ.ನಾಯಕ, ಸದಾಶಿವ ಪಟ್ಟಣಶೆಟ್ಟಿ, ವಿನೋದ ಉಳ್ಳಾಗಡ್ಡಿ, ನಾಗಪ್ಪ ಡುಮ್ಮನ್ನವರ, ಸಂಗಪ್ಪ ವಡರಟ್ಟಿ, ಸದಾಶಿವ ಕೋಳಕಾರ ಸೇರಿದಂತೆ ಗ್ರಾಮಸ್ಥರು, ಉಪನ್ಯಾಸಕರು, ಎನ್ಎಸ್ಎಸ್ ಶಿಬಿರಾಥರ್ಿಗಳು ಇದ್ದರು.

ಎ.ಎಂ.ಉಗಾರೆ ಸ್ವಾಗತಿಸಿದರು. ಎಸ್.ಎಸ್.ಚೌಗಲಾ ನಿರೂಪಿಸಿದರು. ರವಿ ಕಲ್ಲೋಳ್ಳಿ ವಂದಿಸಿದರು.