ಬೈಲಹೊಂಗಲ: ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ

ಲೋಕದರ್ಶನ ವರದಿ

ಬೈಲಹೊಂಗಲ 17:  ಶಿಸ್ತುಬದ್ಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಪ್ರಜೆಯಾಗಲು ಎನ್.ಎಸ್.ಎಸ್. ಸಹಕಾರಿ ಎಂದು ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ ಹೇಳಿದರು.

ಸಮೀಪದ ಇಂಚಲದ ಶಿವಯೋಗೀಶ್ವರ ಸಂಯುಕ್ತ ಪದವಿ-ಪೂರ್ವ  ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾಷರ್ಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಾತ್ಮಾ ಗಾಂಧೀಜಿ  ಅವರ ಗ್ರಾಮ ರಾಜ್ಯದ  ಪರಿಕಲ್ಪನೆಯ ಕನಸಿನ ಕೂಸು ರಾಷ್ರ್ಟೀಯ ಸೇವಾ  ಯೋಜನೆ.  ವಿದ್ಯಾಥರ್ಿಗಳಿಗೆ  ಗ್ರಾಮೀಣ ಜನರ   ದೈನಂದಿನ ಬದುಕಿನ  ನೈಜ ಚಿತ್ರಣವನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು.

    ಸಂಸ್ಥೆಯ ಕಾರ್ಯದಶರ್ಿ ಎಸ್.ಎನ್.ಕೊಳ್ಳಿ ಮಾತನಾಡಿ, ವಿದ್ಯಾಥರ್ಿಗಳು ಯೋಜನೆಯಲ್ಲಿ ತೊಡಗಿಸಿಕೊಳ್ಳುವದರಿಂದ ವ್ಯಕ್ತಿಗತವಾದ ಶಿಸ್ತು, ಸ್ವಾವಲಂಬನೆ, ಬದುಕಿನ ರೀತಿ ವ್ಯಕ್ತಿಗತವಾದ ಅಭಿವೃದ್ದಿಯ ಜೊತೆಗೆ ಸುತ್ತಲಿನ ತೊಂದರೆ ಅರಿತುಕೊಂಡು ಅವುಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ ಎಂದರು.

          ಉಪನ್ಯಾಸಕ ಎಸ್.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಶಿಬಿರಾಧಿಕಾರಿಗಳಾದ ಎಂ.ಬಿ.ಹೂಗಾರ, ಆರ್.ವ್ಹಿ.ಅಣ್ಣಿಗೇರಿ, ಎಸ್.ಎಸ್.ರಾಯನಾಯ್ಕರ ಹಾಗೂ ವಿದ್ಯಾಥರ್ಿಗಳು ಉಪನ್ಯಾಸಕ ಶಿಕ್ಷಕ ಸಿಬ್ಬಂದಿ ವರ್ಗ ಇದ್ದರು.

     ಪ್ರಾಚಾರ್ಯ ಎಸ್.ಟಿ.ಕಾಂಬಳೆ ಸ್ವಾಗತಿಸಿದರು. ಎನ್.ವಿ.ಪಾಟೀಲ ವಂದಿಸಿದರು. ಎ.ಎಮ್.ಪೂಜಾರ ನಿರೂಪಿಸಿದರು