ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 27: ರಾಷ್ಟ್ರೀಯ ಸೇವಾ ಯೋಜನೆಯಅಡಿಯಲ್ಲಿ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ  ಮಾಡಬೇಕೆಂದು ಚೇಳ್ಳಗುರ್ಕಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹನುಮಂತಪ್ಪನವರು ಶ್ರೀ ಗುರುತಿಪ್ಪೇರುದ್ರ ಮಹಾವಿದ್ಯಾಲಯದ ಬಳ್ಳಾರಿಯ ಎನ್ಎಸ್ಎಸ್ 'ಎ' ಮತ್ತು 'ಬಿ' ಘಟಕಗಳು ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಯಾವುದೇ ಕಾರ್ಯವನ್ನು ಕೂಡ ನೂರಕ್ಕೆ ನೂರು ಮಾಡಿದಾಗ ಮಾತ್ರ ಆ ಕಾರ್ಯ ಯಶಸ್ವಿಯಾಗುತ್ತದೆ. 

ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ರಾಜಕೀಯ ಅಥವಾ ಸೇವಾ ವಿಭಾಗದಲ್ಲಿ ಪಡೆದುಕೊಂಡಾಗ ಈಗ ಮಾಡಿದ ಸೇವಾ ಕಾರ್ಯದ ಅನುಭವ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು 'ಬಿ' ಘಟಕದ ಕಾರ್ಯಕ್ರಮಾಧಿಕಾರಿಗಳಾದ ಎ.ಮಲ್ಲಿಕಾಜುರ್ನ ರವರು ಮಾತನಾಡಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾಥರ್ಿಗಳು ತರಗತಿಗಳಲ್ಲಿ ಕಲಿತ ಪಾಠದ ಪ್ರಾಯೋಗಿಕ ಅನುಭವವನ್ನು ಸೇವೆ ಮಾಡುತ್ತಾ ಕಲಿಯಬೇಕಾದುದ್ದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್ರವರು ಮಾತನಾಡಿ ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆ ಮತ್ತು ಗ್ರಾಮೀಣಾಭಿವೃದ್ಧಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಈಗಿನ ಪರಿಸ್ಥಿತಿಯಲ್ಲಿ ಕೋಮು-ಸೌಹಾರ್ದತೆ, ಸಾಮಾಜಿಕ ಶಾಂತಿ, ಬ್ರಾತೃತ್ವ ಮತ್ತು ಸಮಾನತೆ ಪ್ರಸ್ತುತ ಅಗತ್ಯಗಳಾಗಿವೆ.

ರಾಷ್ಟ್ರೀಯ ಸೇವಾ ಯೋಜನೆಯ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಚೇಳ್ಳಗುಕರ್ಿಯ ಎರ್ರಿತಾತ ಮಠದಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ವೈದ್ಯಕೀಯ ಸೇವೆಯನ್ನು ನಡೆಸಿಕೊಟ್ಟ ಡಾ.ಕೆ.ವಿ.ಎಸ್.ಪ್ರಸಾದ್ರವರನ್ನು ಎಲ್ಲಾ ಗಣ್ಯರು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ದಿ. 21ರಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪನವರಿಂದ ಉದ್ಘಾಟನೆಗೊಂಡು ದಿ. 27ರವರೆಗೆ ನಡೆದ ಶಾಲೆಗಳು, ಗ್ರಾಮ ಪಂಚಾಯಿತಿ, ಆಸ್ಪತ್ರೆ, ಸ್ಥಳೀಯ ಐತಿಹಾಸಿಕ ಸ್ಥಳಗಳ ವೀಕ್ಷಣೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವರದಿಯನ್ನು ಎರ್ರಿಸ್ವಾಮಿ ನೀಡಿದನು. ಈ ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ.ಗೌರಿ, ಸ್ವಾಗತವನ್ನುಎರ್ರಿಸ್ವಾಮಿ ಹಾಗೂ ವಂದನಾರ್ಪಣೆಯನ್ನುಗಣೇಶರವರು ನಿರ್ವಹಿಸಿ ಕೊಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.