ನಾರನಗೌಡ ಉತ್ತಂಗಿ
ಮಹಾಲಿಂಗಪುರ೨೯: ಸ್ಥಳೀಯ ನವ ಚೇತನ ಶಿಕ್ಷಣ ಸಂಸ್ಥೆಯ ಜೆಸಿ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ವಿಜ್ಞಾನ ವಸ್ತು ಪ್ರದರ್ಶನದ ಜೊತೆ ಮಲ್ಲಯ್ಯನ ಕಂಬಿ ಕರೆಸಿ ವಿಶೇಷವಾಗಿ ದಿನಾಚರಣೆ ಆಚರಿಸಲಾಯಿತು. ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಜಾತ್ರೆಯ ಮಾದರಿ, ಹನಿ ನೀರಾವರಿ, ಸಂಚಾರಿ ನಿಯಮಗಳು, ಸೌರವಿದ್ಯುತ್, ಪವನ ಶಕ್ತಿ, ಸೇನಾ ಟ್ಯಾಂಕರ್, ವಾಯುಮಾಲಿನ್ಯ, ಜಲಚಕ್ರ ಮುಂತಾದ 120 ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾಥರ್ಿಗಳು ಪ್ರದಶರ್ಿಸಿ, ವಿವರಿಸಿದರು.
ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಜಾತ್ರೆಯ ಮಾದರಿಯನ್ನು ಮನದುಂಬಿ ಹೊಗಳಿದ ಶ್ರೀಗಳು ಮಹಾಲಿಂಗೇಶ್ವರರ ಆಶೀವರ್ಾದ ಇರುವವರೆಗೂ ಈ ಶಾಲೆ ಮತ್ತು ಮಹಾಲಿಂಗಪುರ ಸಮೃದ್ಧಿಯಿಂದ ಕೂಡಿರುತ್ತದೆ ಆ ನಿಟ್ಟಿನಲ್ಲಿ ವಿದ್ಯಾಥರ್ಿಯ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಕಾನಿಪ ಉಪಾಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ವೈಜ್ಞಾನಿಕ ಮನೋಭಾವ ಮತ್ತು ಅದರ ಜೊತೆ ಮಲ್ಲಯ್ಯನ ಕಂಬಿ ಕರೆಸಿ ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುವ ಕೆಲಸವನ್ನು ಒಟ್ಟಿಗೆ ಮಾಡಿರುವುದು ಶ್ಲಾಘನೀಯ ಎಂದರು.
ಮುಖ್ಯೋಪಾಧ್ಯಾಯ ಎಸ್. ಜಿ. ಕೌಜಲಗಿ ಮಾತನಾಡಿ ಸರ್ವಧರ್ಮದ ಮಕ್ಕಳಿಗೂ ಮಲ್ಲಯ್ಯನ ದರ್ಶನ ಮಾಡಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಸತತ 12 ವರ್ಷಗಳಿಂದಲೂ ಪ್ರತಿವರ್ಷ ಮಲ್ಲಯ್ಯನ ಕಂಬಿ ಕರೆಸಿ ಮಕ್ಕಳಿಗೆ ದರ್ಶನ ಭಾಗ್ಯ ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ್ ಪಟೇಲ, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಸದಸ್ಯ ಆರ್. ಜಿ. ಮುಳವಾಡ ಹಾಗೂ ಹಿರಿಯ ಶಿಕ್ಷಕ ನಾಡಗೌಡ ಮತ್ತು ಇತರರು ಇದ್ದರು.