ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಲೋಕದರ್ಶನ ವರದಿ

ಬೆಳಗಾವಿ, 28: ಕೆಎಲ್ಇ ಉನ್ನತ ಶಿಕ್ಷಣ ಸಂಸ್ಥೆಗಳ ಡಾ.ಪ್ರಭಾಕರ ಕೋರೆ ವಿಜ್ಞಾನ ಸಂಶೋಧನಾ ಕೇಂದ್ರ ಬೆಳಗಾವಿ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಗುರುವಾರ 28 ಫೆಬ್ರುವರಿ 2019 ರಂದು ನಡೆದ ಸಮಾರಂಭದಲ್ಲಿ ಸರ್ ಡಾ ಸಿ .ವಿ.ರಾಮನ್ಅವರ ಭೌತ ಶಾಸ್ತ್ರದಲ್ಲಿನ ಅಮೂಲ್ಯವಾದ ಸಂಶೋಧನೆಗಳಿಗಾಗಿ ಗೌರವ ಸಮಪರ್ಿಸಲಾಯಿತು. ಕೇಂದ್ರದ ಉಪನಿದರ್ೇಶಕರಾಗಿರುವ ಡಾ.ಸುನೀಲ್ ಜಲಾಲಪುರೆ ಅವರು ಸರ್ವರಿಗೆ ಸ್ವಾಗತ ಕೋರುತ್ತಾ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಮತ್ತು ಔಚಿತ್ಯದ ಬಗ್ಗೆ ಮಾತನಾಡಿದರು. ಡಾ.ಪ್ರಭಾಕರ ಕೋರೆ ವಿಜ್ಞಾನ ಸಂಶೋಧನಾ ಕೇಂದ್ರದ ಆಡಳಿತಾತ್ಮಕ ನಿವರ್ಾಹಕರಾಗಿರುವ ಡಾ.ಅಲ್ಕಾ ಕಾಳೆ ಡಾ.ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಹಾರ ಸಮಪರ್ಿಸಿ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ ಅಲ್ಕಾ ಕಾಳೆ, ಡಾ.ಪ್ರಭಾಕರ ಕೋರೆ ವಿಜ್ಞಾನ ಸಂಶೋಧನಾ ಕೇಂದ್ರದ ಚಟುವಟಿಕೆಗಳ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ ಕ್ಯಾನ್ಸರ್ ಕ್ಷಯರೋಗ ಮತ್ತಿತರ ರೋಗಗಳ ನಿಮರ್ೂಲನೆಗಳಿಗೆ ವೈದ್ಯಕೀಯ ಕ್ಷೇತ್ರದ ಪ್ರತಿನಿಧಿಗಳು ಸಕರ್ಾರದೊಂದಿಗೆ ಕೈ ಜೋಡಿಸಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಎನ್.ಎಸ್,ಎಸ್ ರಾಷ್ಟ್ರೀಯ ಏಕೀಕರಣ ಶಿಬಿರ 2019 ರ 150ಕ್ಕೂ ಹೆಚ್ಚು ಪ್ರತಿನಿಧಿಗಳು  ಕೇಂದ್ರಕ್ಕೆ ಭೇಟಿ ನೀಡಿ ಅತ್ಯಾಧುನಿಕ ಉಪಕರಣಗಳ ಬಗ್ಗೆ ಮಾಹಿತಿ ಪಡೆದರು. ಕೇಂದ್ರದ ವಿಜ್ಞಾನಿ ಡಾ ಸಂಜಯ್ ಮಿಶ್ರಾ ವಂದನಾರ್ಪಣೆ ಸಲ್ಲಿಸಿದರು.ಕೇಂದ್ರದ ಸಂಶೋಧನಾ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.