ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

ಲೋಕದರ್ಶನ ವರದಿ

ಮುನವಳ್ಳಿ 16: ಜ14ರಂದು ಪಟ್ಟಣದ ರೇಣುಕಾ ಸಕ್ಕರೆ ಕಾಖರ್ಾನೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು. ಕಾಖರ್ಾನೆಯ ಮುಖ್ಯ ವ್ಯವಸ್ಥಾಪಕ ಅಭಯ ಖೋತ ಮಾತನಾಡಿ ರಸ್ತೆ ಅಪಘಾತಗಳಲ್ಲಿ ತಲೆಗೆ ಹೆಚ್ಚು ಪೆಟ್ಟು ಬಿದ್ದು ಪ್ರಾಣಕ್ಕೆ ಹೆಚ್ಚು ಅಪಾಯವಿರುತ್ತದೆ. ಹೆಲ್ಮೆಟ್ ಧರಿಸುವುದರಿಂದ ಜೀವ ಹಾನಿ ತಪ್ಪಿಸಬಹುದು. ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಮದ್ಯಪಾನ ಮಾಡಿ, ಅವಸರದಿಂದ ಅಥವಾ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅವಘಡಕ್ಕೆ ಕಾರಣವಾಗುತ್ತದೆ. ಅದಕ್ಕೆಂದೆ ಹಿರಿಯರು ಎನ್ನುವ ನಿಧಾನವೇ ಪ್ರಧಾನ ಎಂಬ ಮಾತನ್ನು ನಾವೆಲ್ಲ ಪಾಲಿಸೋಣ ಎಂದರು.

    ಕಾಖರ್ಾನೆ ಸುರಕ್ಷತಾ ಜನರಲ್ ಮ್ಯಾನೇಜರ ಎ. ವೆಂಕಟೇಶ, ವೀರಯ್ಯ ವಿರಕ್ತಮಠ, ಬಸವರಾಜ ಪೂಜೇರ ಸೇರಿದಂತೆ ಕಾಖರ್ಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು. ಕಾರ್ಯಕ್ರಮದ ಮಒದಲು ಸುರಕ್ಷತಾ ಸಪ್ತಾಹದ ಅಂಗವಾಗಿ ಪಟ್ಟಣದ ಆಲೂರ ಮಠದಿಂದ ಕಾಖರ್ಾನೆ ವರೆಗೆ ಬೈಕ್ ಜಾಥಾ ಜರುಗಿತು.