ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ

ಬೆಳಗಾವಿ, 17 : ಗರ್ಭಿ ಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ಕೊರತೆ ನಿಗಿಸಲು ಸರ್ಕಾ ರವು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಮಾಹೆ ಕಾರ್ಯಕ್ರಮವನ್ನು ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ವಾಡರ್್ ನಂ 40ರ ಕಾರ್ಪೊ ರೇಟರ್ ಅನುಶ್ರೀ ದೇಶಪಾಂಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.

ಗಭರ್ಿಣಿಯರ ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರ್ಕಾ ರ ಹಲವಾರು ಯೋಜನೆಗಳನ್ನು ಮಾಡಿದ್ದರೂ ಅದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಲು ಪೋಷಣಾ ಅಭಿಯಾನ ಅನುಕೂಲಕರವಾಗಿದೆ ಎಂದು ಹೇಳಿದರು. ಹಾಗೇಯೆ ಇಂತಹ ಕಾರ್ಯ ಕ್ರಮಗಳನ್ನು ಯಶಸ್ವಿಗೊಳಿಸಲು ಅಂಗನವಾಡಿ ಕಾರ್ಯಕರ್ತ್ ಯರ ಕಾರ್ಯವೈಕರಿಯನ್ನು ಮೆಚ್ಚಿಕೊಂಡರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಿಕಿಯಾದ ಕಮಲಾ ಬಾಸರಗಿ ಅವರು ಮಾತನಾಡಿ ಸತ್ಪ್ರಜೆಗಳನ್ನು ರೂಪಿಸಲು ಗಭರ್ಾವಸ್ಥೆಯಿಂದಲೆ ಮಹಿಳೆಯರಿಗೆ ಸತ್ವಯುತ ಆಹಾರ ನೀಡುವುದು ಸ್ವಚ್ಚವದ ನೀರು ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವುದೆ ಸಕರ್ಾರದ ಉದ್ದೇಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ನಾಗೇಂದ್ರ ವ್ಹಿ. ಹಿರೇಮಠ ಮಾತನಾಡಿ ಅಪೌಷ್ಠಿಕತೆ ನಿರ್ಮೂ ಲನೆಗಾಗಿ ಪೋಷಣ ಅಭಿಯಾನ ಒಳ್ಳೆಯ ಉದ್ದೇಸ ಒಳಗೊಂಡ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಕಾರ್ಯಮದಲ್ಲಿ ಗರ್ಭಿ ಣಿಯರಿಗೆ ಉಡಿ ತುಂಬಿ ಆರತಿ ಮಾಡುವುದರ ಮೂಲಕ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಗಭರ್ಿಣಿಯರಿಗೆ ಪೌಷ್ಠಿಕ ಆಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಹಿರಿಯ ಮೇಲ್ವಿಚಾರಿಕಿಯಾದ ಜ್ಯೋತಿ ಇಂಡಿ, ಲೀಲಾ ದಾಕ್ಷಿನಕೊಪ್ಪ, ಹನಮಾನ ಮಂದಿರ ಟ್ರಸ್ಟ್ನ ಎಮ್.ಎಸ್. ಸಂಭಯ್ಯನವರ, ಶಕುಂತಲಾ ರೆಡ್ಡಿ, ಶೋಭಾ ಕ್ಷೀರಸಾಗರ, ಶಾರದಾ ಐಹೊಳೆ, ಪ್ರಾಥಮಿಕ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.