ಮೇ 1ರಿಂದ ಚೀನಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಪುನಾರಂಭ

ಬೀಜಿಂಗ್, ಏ 30, ಚೀನಾದಲ್ಲಿ ಕೋವಿಡ್ -19 ಬಿಕ್ಕಟ್ಟು ಶಮನಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮೇ 1ರಿಂದ ಪುನಾರಂಭಗೊಳ್ಳಲಿದೆ ಎಂದು ಅದರ ವೆಬ್ ಸೈಟ್ ಮಾಹಿತಿ ನೀಡಿದೆ. ಪ್ರವಾಸಿಗರು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದಿನವೊಂದಕ್ಕೆ ಭೇಟಿ ನಿಡುವ ಜನರ ಸಂಖ್ಯೆಯನ್ನು 3 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಪ್ರವಾಸಿಗರು ವಸ್ತು ಸಂಗ್ರಹಾಲಯ ಪ್ರವೇಶಿಸುವ ತಮ್ಮ ವೈಯಕ್ತಿಕ ಗುರುತಿನ ಚೀಟಿ ಮತ್ತು ತಮ್ಮ ತಾಪಮಾನವನ್ನು ಒಳಗೊಂಡಿರುವ ವೈಯಕ್ತಿಕ ಆರೋಗ್ಯದ ಕೋಡ್ ಅನ್ನು ಸಲ್ಲಿಸಬೇಕು. ಪ್ರವಾಸಿಗರು ಪರಸ್ಪರ 1.5 ಮೀಟರ್ ಅಂತರ ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ನೋಟಿಸ್ ತಿಳಿಸಿದೆ.