ರಾಷ್ಟ್ರೀಯ ಲೋಕ ಅದಾಲತ್: 496 ಪ್ರಕರಣಗಳಿಗೆ ರಾಜೀ ಸಂಧಾನ

ಲೋಕದರ್ಶನವರದಿ

 ಹುನಗುಂದ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಇಲ್ಲಿನ 3 ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 496 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.

 ಅದಾಲತ್ನಲ್ಲಿ ರಸ್ತೆ ಅಪಘಾತ, ಅಬಕಾರಿ, ಚೆಕ್ ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ತಾಲೂಕಾಧ್ಯಂತ ಒಟ್ಟು 707 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.

 ತಾಲೂಕು ನ್ಯಾಯಾಲಯದಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ರವರೆಗೆ ಅದಾಲತ್ ನಡೆಯಿತು. 3 ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ 60ಕ್ಕೂ ಸಮಾಲೋಚನಾ ವಕೀಲರು ಅದಾಲತ್ ನಡೆಸಿಕೊಟ್ಟರು. 

 ಕೆಲ ಅಜರ್ಿದಾರರು ವಕೀಲರ ಜೊತೆ ಅದಾಲತ್ನಲ್ಲಿ ಭಾಗವಹಿಸಿದ್ದರು. ಸರದಿಯಲ್ಲಿ ಪ್ರಕರಣಗಳು ಇತ್ಯರ್ಥವಾದವು.

      ಹಿರಿಯ ದಿವಾಣಿ ನ್ಯಾಯಾಧೀಶರಾದ ರವೀಂದ್ರ ಹೊನೋಲೆ, ಪ್ರಧಾನ ದಿವಾಣಿ ನ್ಯಾಯಾಧೀಶರಾದ ಬಿ.ಮೋಹನ ಬಾಬು, ಅಪರ ದಿವಾಣಿ ನ್ಯಾಯಾಧೀಶರಾದ ಜಗದೀಶಗೌಡ, ಸಂಧಾನಕಾರರಾದ ನ್ಯಾಯವಾದಿ ವಾದಿರಾಜ ಬಿ.ದೇಶಪಾಂಡೆ, ವಕೀಲರ ಸಂಘದ ಅಧ್ಯಕ್ಷ ಬಿ.ಎ.ಆವಟಿ ಹಾಗೂ ವಕೀಲರ ಸಂಘದ ಸದಸ್ಯರು, ಎ.ಪಿ.ಪಿ.ಎಸ್.ಎಂ.ಹಂಜಿ ಉಪಸ್ಥಿತರಿದ್ದರು