ಕೊಪ್ಪಳ 11: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಮುದಾಯ ವೈದ್ಯಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ (ಫೆ.10) ಕಿಮ್ಸ್ ಕಾಲೆಜಿನಲ್ಲಿ ಹಮ್ಮಿಕೊಳ್ಳಾದ "ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ್ ಮಾತನಾಡಿ, ಪ್ರಥಮ ಹಾಗೂ ದ್ವಿತೀಯ ವರ್ಷದ ವೈದ್ಯಕೀಯ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳಿಗೆ ಜಂತು ಹುಳು ನಿವಾರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾ, ಎಲ್ಲರಿಗೂ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡಿ ನುಂಗಿಸಲಾಯಿತು. ಹಾಗೂ ತಮ್ಮ ತಮ್ಮ ಮನೆಗಳಲ್ಲಿ 01 ರಿಂದ 19 ವರ್ಷದ ಮಕ್ಕಳಿದ್ದರೆ ಈ ಮಾತ್ರೆಯನ್ನು ತಪ್ಪದೆ ನೀಡಲು ಮತ್ತು ಸಾರ್ವಜನಿಕರಲ್ಲಿ ಇದರ ಬಗ್ಗೆ ಜಾಗ್ರತಿ ಮೂಡಿಸಲು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ವಿಜಯನಾಥ ಇಟಗಿ, ಪ್ರಾಂಶುಪಾಲರಾದ ಡಾ.ರಾಘವೇಂದ್ರ ಬಾಬು, ಮುಖ್ಯ ಆಡಳಿತಾಧಿಕಾರಿ ವೀರಣ್ಣ ಕಮತಾರ, ಆಥರ್ಿಕ ಸಲಹೆಗಾರರಾದ ಮಲ್ಲಿಕಾರ್ಜುನಗೌಡ ಪಾಟಿಲ್ ಮತ್ತು ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾಜರ್ುನ ಬಿರಾದಾರ, ಸಹ ಪ್ರಾಧ್ಯಾಪಕರಾದ ಡಾ.ರವೀಂದ್ರನಾಥ ಭೋವಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಸ್ಮಿತಾ ನಿಂಬಣ್ಣವರ್, ಡಾ.ಶರಣಕುಮಾರ್ ಹೊಳಿಯಾಚಿ, ಡಾ.ವಿಜಯಕುಮಾರ ಮಾನೆ, ಡಾ.ಚೇತನಾ ಕೆ ವಿ, ಡಾ.ಅನೀಲ್ಕುಮಾರ್ ಎಲ್ ಸೇರಿದಂತೆ ವಿಭಾಗದ ಇತರೆ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳಲ್ಲದೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾದ ಡಾ.ಜಂಬಯ್ಯ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ ಏಂ.ಜಿ, ಹಾಗೂ ಕೊಪ್ಪಳ ತಾಲೂಕ ವೈದ್ಯಾಧಿಕಾರಿಗಳಾದ ಡಾ.ರಾಮಾಂಜನೇಯ ಉಪಸ್ಥಿತರಿದ್ದರು.