ಬಿ.ವ್ಹಿ.ಬೆಲ್ಲದ ಕಾನೂನು ಕಾಲೇಜಿನಿಂದ ಎ.26, 27 ರಾಷ್ಟ್ರೀಯ ಕಾನೂನು ಉತ್ಸವ

National Law Festival from B.V.Bella Law College on 26th and 27th April

ಬೆಳಗಾವಿ ಎ.22: ಕೆ.ಎಲ್‌.ಇ. ಸಂಸ್ಥೆಯ ಬಿ.ವಿ. ಬೆಲ್ಲದ್ ಕಾನೂನು ಕಾಲೇಜು, ಬೆಳಗಾವಿ, 50 ವರ್ಷಗಳ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 1975 ರಲ್ಲಿ ಸ್ಥಾಪಿತವಾದ ಈ ಕಾಲೇಜು ಕೆ.ಎಲ್‌.ಇ. ಸಂಸ್ಥೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, 3 ವರ್ಷ ಹಾಗೂ 5 ವರ್ಷದ ಕಾನೂನು ಪದವೀಧರ ಕೋರ್ಸ್‌ಗಳನ್ನು ನೀಡುತ್ತಿದೆ. ಸಮಾನತೆಯ ಸಮಾಜ ನಿರ್ಮಿಸಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಕಾನೂನಿನ ಅರಿವು, ರಾಷ್ಟ್ರದ ಕಾನೂನಿನ ಕೈಗಳನ್ನು ಬಲಪಡಿಸಲು ಗುಣಾತ್ಮಕ ಕಾನೂನು ಶಿಕ್ಷಣವನ್ನು ನೀಡುತ್ತಿದೆ ಎಂದು ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ ಹೇಳಿದರು. ಅವರು ಬೆಲ್ಲದ ಕಾನೂನು ಕಾಲೇಜಿನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 

ಕಾಲೇಜು 2025ರ ಏಪ್ರಿಲ್ 26 ಮತ್ತು 27 ರಂದು ಕೆಎಲ್‌ಇ ಲಾ ಅಕಾಡೆಮಿ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಕಾನೂನು ಉತ್ಸವ (ಓಚಿಣಠಚಿಟ ಐಚಿತಿ ಈಣ) ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಕಾನೂನು ಕ್ವಿಜ್ ಮತ್ತು ಕ್ಲೈಂಟ್ ಕೌನ್ಸಲ್ಟೇಶನ್ ಸ್ಪರ್ಧೆಗಳು ನಡೆಯಲಿದ್ದು, ದೇಶದ್ಯಂತದಿಂದ 20 ಕ್ಕೂ ಹೆಚ್ಚು ತಂಡಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಲಿದ್ದಾರೆ. ಸ್ಪರ್ಧೆಯು ಕಾನೂನು ಕಾರ್ಯಾಲಯದ ಪರಿಕಲ್ಪನೆಯಲ್ಲಿ ರೂಪಿಸಲಾಗಿದ್ದು, ಇಬ್ಬರು ಕಾನೂನು ವಿದ್ಯಾರ್ಥಿಗಳು ವಕೀಲರಾಗಿ (ಅಟಾರ್ನಿ/ಸಾಲಿಸಿಟರ್‌/ಕಾನೂನು ತಜ್ಞರಂತೆ) ಕಕ್ಷಿದಾರ(ಕ್ಲೈಂಟ್) ಪಾತ್ರವಹಿಸುವ ವ್ಯಕ್ತಿಯೊಂದಿಗೆ ಸಂದರ್ಶನ ನಡೆಸುತ್ತಾರೆ. ನಂತರ, ಕಕ್ಷಿದಾರ ಇಲ್ಲದ ವೇಳೆ ಅವರು ಸಂದರ್ಶನವನ್ನು ವಿಶ್ಲೇಷಿಸಿ, ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಗೆ  35 ನಿಮಿಷಗಳ ಅವಧಿ ಇರುತ್ತದೆ. ಸ್ಪರ್ಧಾರ್ಥಿಗಳನ್ನು ನ್ಯಾಯಾಧೀಶರ ಮಂಡಳಿಯು ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ, ಕೇಳುವಿಕೆ, ಪ್ರಶ್ನಿಸುವಿಕೆ, ಯೋಜನೆ ಮತ್ತು ವಿಶ್ಲೇಷಣಾ ಕೌಶಲಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ ಎಂದು ಡಾ.ಜ್ಯೋತಿ ಅವರು ತಿಳಿಸಿದರು. 

2025ರ ಏಪ್ರಿಲ್ 26ರಂದು ಬೆಳಿಗ್ಗೆ 10.00 ಗಂಟೆಗೆ ಈ ಉತ್ಸವವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಎಸ್‌.ವಿ. ಕುಲಕರ್ಣಿ ಉದ್ಘಾಟಿಸಲಿದ್ದು, ವಕೀಲರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್‌.ಬಿ. ಬೆಲ್ಲದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

2025ರ ಏಪ್ರಿಲ್ 27ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ, ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಶಾನಂದ, ಕರ್ನಾಟಕ ಆಡಳಿತಾಧಿಕಾರಣಾ ಟ್ರಿಬ್ಯೂನಲ್, ಬೆಂಗಳೂರು ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಬೂದಿಹಾಳ ಆರ್‌.ಬಿ., ಭಾರತದ ಸುಪ್ರೀಂಕೋರ್ಟ್‌ ನ್ಯಾಯವಾದಿ ಮಾರುತಿ ಬಿ. ಜೀರಲಿ, ಕೆ.ಎಲ್‌.ಇ. ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರಿಶೈಲಪ್ಪ ಸಿ. ಮೆಟಗುಡ ಆಗಮಿಸಲಿದ್ದಾರೆ ಎಂದು ತಿಳಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಐಕ್ಯೂಎಸ್‌ಸಿ ಸಂಯೋಜಕರಾದ ಡಾ.ಉಮಾದೇವಿ ಹಿರೇಮಠ, ಇವೆಂಟ್ ಸಂಯೋಜಕರಾದ ಡಾ.ಸಂತೋಷ ಪಾಟೀಲ, ಕಾಲೇಜು ಜನರಲ್ ಸೆಕ್ರಟರಿ ಆಕಾಶ ಅಮರಶೆಟ್ಟಿ ಉಪಸ್ಥಿತರಿದ್ದರು.