ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-4ಎ ಕಾಮಗಾರಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಬೆಳಗಾವಿ-ಗೋವಾ ಹಾಗೂ ಧಾರವಾಡ-ಗೋವಾ ಮಾರ್ಗಗಳ ಬದಲಾವಣೆ ಹಾಗೂ ಪಯರ್ಾಯ ಮಾರ್ಗ ಕಲ್ಪಿಸುವ ಕುರಿತಂತೆ ಕೂಡಲೇ ಸ್ಥಳ ಪರಿಶೀಲನೆ ಕೈಗೊಂಡು ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ(ಜುಲೈ 27) ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಯರ್ಾಯ ಮಾರ್ಗದ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ, ಲೋಕೋಪಯೋಗಿ ಇಲಾಖೆ, ಆರ್ಟಿಓ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಯಿತು.
ಸಂಪೂರ್ಣ ಮಾರ್ಗ ಪರಿಶೀಲಿಸಿ ರಸ್ತೆ ಗುಣಮಟ್ಟ ಮತ್ತು ಸೇತುವೆಗಳ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡು ನಕ್ಷೆ ಸಮೇತ ಪಯರ್ಾಯ ಮಾರ್ಗಗಳ ಬಗ್ಗೆ ವರದಿ ನೀಡುವಂತೆ ತಂಡದ ಸದಸ್ಯರಿಗೆ ಸೂಚನೆ ನೀಡಿದರು.
ಅದೇ ರೀತಿ ತಾಲ್ಲೂಕು ಪಂಚಾಯ್ತಿ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ತಹಶೀಲ್ದಾರ ನೇತೃತ್ವದ ಇನ್ನೊಂದು ತಂಡವು ರಸ್ತೆ ಕಾಮಗಾರಿಗಳಿಂದ ಅನಾನುಕೂಲವಾಗುವ ಗ್ರಾಮಗಳು, ಬಸ್ ಸಂಚಾರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ತಿಳಿಸಿದರು.
ಎನ್ಎಚ್-4 ಎ ನಿಮರ್ಾಣದ ವೇಳೆ ಮರಗಳನ್ನು ಹೇಗೆ ರಕ್ಷಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚಚರ್ೆ ನಡೆಯಿತು.
ದೂರವಾಣಿ ಸಂಕರ್ಪ, ನೀರು ಸರಬರಾಜು ಪೈಪ್ಲೈನ್ಗಳು, ವಿದ್ಯುತ್ ಮಾರ್ಗಗಳ ಬದಲಾವಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೇಶಕರ ಜತೆ ಚಚರ್ಿಸಿ ಪಯರ್ಾಯ ವ್ಯವಸ್ಥೆಯ ಬಗ್ಗೆ ನಿರ್ಧರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು.
ಸಂಚಾರ ನಿರ್ವಹಣೆ ಸವಾಲು:
ರಸ್ತೆ ಕಾಮಗಾರಿ ಪೂರ್ಣಗೊಳ್ಳುವರೆಗೆ ಪಯರ್ಾಯ ಮಾರ್ಗ ಒದಗಿಸುವುದು ಅನಿವಾರ್ಯ. ಆದರೆ ಸಾರ್ವಜನಿಕರ ಹಾಗೂ ಸರಕು ಸಾಗಣೆಯ ಬೃಹತ್ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಿರುವಂತಹ ಮಾರ್ಗಗಳ ಬಗ್ಗೆ ಪರಿಶೀಲಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ ಹೇಳಿದರು.
ಕಿರಿದಾದ ರಸ್ತೆಗಳಿಂದ ಸಂಚಾರ ಸಮಸ್ಯೆ ಉಂಟಾಗಬಹುದು ಅಥವಾ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಬಹುದು ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಧಾರವಾಡ ಜಿಲ್ಲಾಡಳಿತ ಹಾಗೂ ಗೋವಾ ಆಡಳಿತದ ಸಮನ್ವಯದೊಂದಿಗೆ ಪಯರ್ಾಯ ಮಾರ್ಗ ಕಲ್ಪಿಸಬೇಕಿದೆ ಎಂದರು.
82.3 ಕಿ.ಮೀ ರಸ್ತೆ ನಿಮರ್ಾಣ:
ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯಿಂದ ಒಟ್ಟಾರೆ 82.3 ಕಿ.ಮೀ. ಉದ್ದದ ರಸ್ತೆಯು ಎರಡು ಪ್ಯಾಕೇಜ್ನಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಪ್ಯಾಕೇಜ್-1 ರಲ್ಲಿ ಚತುಷ್ಪಥ ನಿಮರ್ಾಣಗೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.
ಪ್ಯಾಕೇಜ್-2 ರಲ್ಲಿ 486.78 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 52.30 ಕಿ.ಮೀ. ರಸ್ತೆ ನಿಮರ್ಾಣ ಮಾಡಲಾಗುವುದು. ಖಾನಾಪುರದಿಂದ ಗೋವಾ ಗಡಿಯವರೆಗೆ ರಾಮನಗರ, ಅನಮೋಡ್ ಮಾರ್ಗವಾಗಿ ಈ ರಸ್ತೆ ನಿಮರ್ಾಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಹಾಗೂ ಯೋಜನಾ ನಿದರ್ೇಶಕರಾದ ಕರ್ನಲ್ ಜಾನಬಾಜ್ ಸಭೆಯಲ್ಲಿ ವಿವರಿಸಿದರು.
ಈ ರಸ್ತೆ ನಿಮರ್ಾಣ ಯೋಜನೆಯಡಿ ಒಟ್ಟು 3ವಾಹನ ಅಂಡರ್ಪಾಸ್, 5 ಆನೆಗಳಿಗೆ ಅಂಡರಪಾಸ್ಗಳು, 7 ಬಸ್ ನಿಲ್ದಾಣ/ಶೆಲ್ಟರ್ಗಳು, 1 ಟೋಲ್ ಪ್ಲಾಝಾ, 1 ಬೃಹತ್ ಸೇತುವೆ, 8 ಸಣ್ಣ ಸೇತುವೆಗಳು, 2 ರೈಲ್ವೆ ಮೇಲ್ಸೇತುವೆಗಳನ್ನು ನಿಮರ್ಿಸಲಾಗುವುದು ಎಂದು ಅವರು ತಿಳಿಸಿದರು.
ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೇಶಕ ಶಮರ್ಾ, ಖಾನಾಪುರ ತಹಶೀಲ್ದಾರ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಸಾರಿಗೆ, ಬಿಎಸ್ಎನ್ಎಲ್, ಪೊಲೀಸ್, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.