ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ: ತಾಲೂಕ ಮಟ್ಟದ ಕಾರ್ಯಕ್ರಮ

ಬೆಳಗಾವಿ, 26 : ಮಕ್ಕಳಲ್ಲಿ ಜಂತುಹುಳುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಅಲ್ಬೆಂಡಜೋಲ್ ಮಾತ್ರೆಯ ಮಹತ್ವದ ಬಗ್ಗೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸಾವಿತ್ರಿ ಬೆಂಡಿಗೇರಿ ಅವರು ಮಾಹಿತಿ  ನೀಡಿದರು.  

ತಾಲೂಕಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ  ಅಶೋಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 25 ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಜಂತುಹುಳುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿ 1 ರಿಂದ 6 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆ ನೀಡಲು ಸಲಹೆ ನಿಡಿದರು.

ಖಾನಾಪೂರ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ ಸಂಜೀವ ನಾಂದ್ರೆ ಅವರು ಮಾತನಾಡಿ,  ಖಾನಾಪೂರ ತಾಲೂಕಿನಲ್ಲಿ 1 ರಿಂದ 19 ವರ್ಷದ ಒಟ್ಟು 68062 ಮಕ್ಕಳಿಗೆ ಅಲ್ಬೆಂಡಜೋಲ್  ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ. 1 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಗಳ ಮೂಲಕ ಹಾಗೂ 6 ರಿಂದ 19 ವರ್ಷದ ಮಕ್ಕಳಿಗೆ ಸಕರ್ಾರಿ, ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜು ಹಾಗೂ ವೃತ್ತಿಪರ ಕೋಸರ್್ಗಳ ಕಾಲೇಜುಗಳಲ್ಲಿ ಅಲ್ಬೆಂಡಜೋಲ್  ಮಾತ್ರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಮತ್ತು ಈ ದಿನ ಗೈರು ಹಾಜರಾದ ಮಕ್ಕಳಿಗೆ ಸೆಪ್ಟಂಬರ್ 30 ರಂದು ಮಾಪ್ ಆಪ್ ಡೆ ದಿನ ಅಲ್ಬೆಂಡಜೋಲ್  ಮಾತ್ರೆಗಳನ್ನು ನೀಡಲಾಗವುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸಾವಿತ್ರಿ ಬೆಂಡಿಗೇರಿ ಮತ್ತು ತಾಲೂಕಾ ನ್ಯೂಡೆಲ್ ಅದಿಕಾರಿಗಳು, ಖಾನಾಪುರ ತಾಲೂಕಾ ಆರೋಗ್ಯಾಧಿಕಾರಿಗಳಾದ  ಡಾ. ಸಂಜೀವ ನಾಂದ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ  ವೈದ್ಯಾಧಿಕಾರಿಗಳಾದ ಡಾ. ರಮೇಶ ಪಾಟೀಲ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ವೈದ್ಯಾಧಿಕಾರಿಗಳಾದ ಡಾ ಶಿವಾನಂದ ಕಿಣಗಿ, ಶಾಲಾ ಮುಖ್ಯೋಪಾದ್ಯಾರಾದ ಆಯ್.ಬಿ. ವಸ್ತ್ರದ, ಶಾಲಾ ಸಿಬ್ಬಂದಿ ವರ್ಗ, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಎಸ್.ಡಿ,ಎಮ್. ಸಿ ಸದಸ್ಯರು, ಆಶಾ ಕಾರ್ಯಕರ್ತರು ಹಾಜರಿದ್ದರು.

       ಕಾರ್ಯಕ್ರಮವನ್ನು ಅಶೊಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕರಾದ ಸುಶೀಲ ಮಠಪತಿ ನಿರೂಪಿಸಿದರು.