ದೇಶದ ಮಹಾ ಉತ್ಸವ - ಲೋಕಸಭಾ ಚುನಾವಣೆ-2019 ಮತದಾನ ಜಾಗೃತಿ ವಸ್ತು ಪ್ರದಶನಕ್ಕೆ ಡಿಸಿ, ಸಿಇಓ ಚಾಲನೆ

ಲೋಕದರ್ಶನ ವರದಿ

ಬಾಗಲಕೋಟೆ, 29: ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹಾಗೂ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.

ನವನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡ ಮತದಾರರಲ್ಲಿ ಜಾಗೃತಿ ಮೂಡಿಸುವ ಹಾಗೂ ಚುನಾವಣಾ ಸಮಗ್ರ ಮಾಹಿತಿ ಫಲಕಗಳನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸುಭದ್ರ ಸರಕಾರ ನಿಮರ್ಾಣಕ್ಕೆ ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಸಂವಿಧಾನವಾಗಿ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಕಾರಣಿಕರ್ತರಾಗಬೇಕು ಎಂದರು.

ಸಾರ್ವಜನಿಕರ ಸಲಹೆ ಸೂಚನೆಗಳ ಮೇರೆಗೆ ತಮ್ಮೆಲ್ಲರ ಸಹಕಾರದೊಂದಿಗೆ ಯಾವುದೇ ಆಶೆ, ಆಮಿಷಗಳಿಗೆ ಒಳಗಾಗದೇ ನಿರ್ಭಯವಾಗಿ ಮತ ಚಲಾಯಿಸಲು ಮುಕ್ತ ಅವಕಾಶ ಮಾಡಿಕೊಳಾಗುತ್ತಿದೆ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮಗೆ ದೊರೆತ ಹಕ್ಕನ್ನು ಚಲಾಯಿಸಬೇಕು. ಚುನಾವಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಸಲುವಾಗಿ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸು ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಮತದಾನ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ ಚುನಾವಣಾ ಆಯೋಗದ ನಿದರ್ೇಶನದ ಮೇರೆ ವಾತರ್ಾ ಇಲಾಖೆಯು ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಬಾಗಲಕೋಟೆಯಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಈ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಮತದಾನ ಮಹತ್ವವನ್ನು ಸಾರುವ ಮಾಹಿತಿ ಫಲಕಗಳನ್ನು ಪ್ರದಶರ್ಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಿತಿನ್ ಹೆಗಡೆ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮೈತ್ರಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಖಡಿ ಸೇರಿದಂತೆ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ಹಾಗೂ ಸಿಬ್ಬಂದಿವರ್ಗವದರು ಉಪಸ್ಥಿತರಿದ್ದರು.   

ವಸ್ತು ಪ್ರದರ್ಶನದಲ್ಲಿ ಚುನಾವಣಾ ಅಕ್ರಮ ಕಂಡಲ್ಲಿ ಸಾಕ್ಷಿ ಸಮೇತ ಆಯೋಗಕ್ಕೆ ದೂರು ನೀಡಲು, ಸಿ-ವಿಜಿಲ್ ಆಪ್, ಅಶಕ್ತರಿಗೆ ಮೊದಲ ಪ್ರಾಶಸ್ತ್ಯ ಅವರಿಗಾಗಿ ವಿಶೇಷ ಸೌಲಭ್ಯ, ಪ್ರಜಾತಂತ್ರದಲ್ಲಿ ಮತದಾನವೇ ಹಬ್ಬ, ಓದು ವ್ಯಕ್ತಿತ್ವವನ್ನು ರೂಪಿಸಿದರೆ, ಮತದಾನ ದೇಶವನ್ನು ರೂಪಿಸುತ್ತದೆ, ತಪ್ಪದೇ ಮತದಾನ ಮಾಡಿ ಹಾಗೂ ವೆಬ್ನಲ್ಲಿ ಚುನಾವಣಾ ಸಮಗ್ರ ಮಾಹಿತಿ ಎಂಬ ಮಾಹಿತಿ ಫಲಕಗಳನ್ನು ಪ್ರದಶರ್ಿಸಲಾಯಿತು.