ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಾಗೂ ಲೈನ್‌ಮನ್ ದಿವಸ್ ಕಾರ್ಯಕ್ರಮ

ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಾಗೂ ಲೈನ್‌ಮನ್ ದಿವಸ್ ಕಾರ್ಯಕ್ರಮ National Electrical Safety Week and Lineman's Day program

         ಶಿಗ್ಗಾವಿ 11 : ಹೆಸ್ಕಾಂ ಇಲಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆ, ಸಿಬ್ಬಂದಿಗಳ ಸುರಕ್ಷತೆಯ ಜೊತೆಗೆ ಎಚ್ಚರಿಕೆಯ ಕಾರ್ಯ ಅವಶ್ಯವಾಗಿದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ ಹೇಳಿದರು. 

ಪಟ್ಟಣದ ಹೆಸ್ಕಾಂ ಕಛೇರಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಾಗೂ ಲೈನ್‌ಮನ್ ದಿವಸ್ ಕಾರ್ಯಕ್ರಮದಲ್ಲಿ ಲೈನ್‌ಮನ್‌ಗಳನ್ನ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯುತ್ ಅವಘಡಗಳನ್ನ ತಗ್ಗಿಸುವಲ್ಲಿ ಪೀಡರ್‌ಗಳ ನಿರ್ವಹಣೆ ಮುಖ್ಯವಾಗಿದೆ, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸಿಬ್ಬಂದಿಗಳ ಕುಟುಂಬದ ನಷ್ಟವನ್ನ ಅರಿತು ಕಾರ್ಯ ಮಾಡುವ ಅವಶ್ಯಕತೆ ಇದೆ, ಎಲ್ಲರ ಹಿತ ಹಿಲಾಖೆಯ ಇತವಾಗಿದೆ ಆ ನಿಟ್ಟಿನಲ್ಲಿ ಸುರಕ್ಷತೆ ಮುಖ್ಯ ಎಂದರು. 

ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಸಿ ಬಿ ಹೋಸಮನಿ, ವಿ ಎಸ್ ಮರಿಗೌಡ್ರ ಹಾಗೂ ಸಿಬ್ಬಂದಿಗಳಾದ ಜಾಕಿರ್ ಪರಾಷ್, ನಿಂಗಪ್ಪ ಹಳವಳ್ಳಿ, ರಮೇಶ ವನಳ್ಳಿ, ಮಂಜುನಾಥ ಮನ್ನಣ್ಣನವರ, ಶಿವಪ್ಪ ಗಂಜಿಗಟ್ಟಿ, ಗುಡ್ಡಪ್ಪ ಬಳ್ಳಾರಿ, ಪಕ್ಕಿರ​‍್ಪ ಮಂಚಿನಕೊಪ್ಪ, ನಿಸ್ಸಾರಹ್ಮದ ಮುಲ್ಲಾನವರ, ಮುಸ್ತಾಕ ಅಹ್ಮದ ತಹಸಿಲ್ದಾರ್, ಅಣ್ಣಪ್ಪ ನಡಟ್ಟಿ, ರುದ್ರೇಶ ಗುಡಗೇರಿ, ಮಹೇಶ ಹುಲಸೋಗಿ, ಮಹಾಲಿಂಗಪ್ಪ ಕುಂಬಾರ, ಸಂಜೀವ ಪಾಳೆದ, ರವಿ ಕೊಣಪ್ಪನವರ, ಇಸ್ಮಾಯಿಲ್ ಅಕ್ಕಿ, ಬೀರೆಶಕುಮಾರ ಜಟ್ಟೆಪ್ಪನವರ ಸೇರಿದಂತೆ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.