ಲವ್ ಜಿಹಾದ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಕೇರಳ ಸರ್ಕಾರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹ

ನವದೆಹಲಿ,ಜ  ೨೭:          ಲವ್ ಜಿಹಾದ್ ವಿರುದ್ಧ  ಕಠಿಣ ಕ್ರಮ  ಕೈಗೊಳ್ಳಬೇಕು  ಎಂದು  ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ   ಸೋಮವಾರ  ಕೇರಳ   ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಯುವತಿಯರನ್ನು  ಬಲವಂತವಾಗಿ ಮತಾಂತರಗೊಳಿಸಿ,  ಅವರನ್ನು  ವಿದೇಶಗಳಿಗೆ  ಕರೆದೊಯ್ದು  ಲವ್ ಜಿಹಾದ್  ಹೆಸರಿನಲ್ಲಿ   ಮುಸ್ಲಿಂ  ಯುವಕರು ವಿವಾಹ ಮಾಡಿಕೊಳ್ಳುತ್ತಿರುವ  ಘಟನೆಗಳ ಬಗ್ಗೆ ರಾಜ್ಯ ಸರ್ಕಾರ  ಕಠಿಣ ಕ್ರಮ ಕೈಗೊಳ್ಳಬೇಕೆಂದು  ರೇಖಾ ಶರ್ಮಾ  ಕೇರಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.   

ವಿಭಿನ್ನ ಧರ್ಮಗಳ ನಡುವೆ ವಿವಾಹ ಮಾಡಿಕೊಳ್ಳುವುದು  ಸಮಸ್ಯೆ ಅಲ್ಲ.  ಅದಕ್ಕೆ ವಿರೋಧವೂ ಇಲ್ಲ.  ಆದರೆ, ಯುವತಿಯರನ್ನು ಬಲವಂತದಿಂದ ಮತಾಂತರಗೊಳಿಸಿ   ಅವರನ್ನು  ವಿವಾಹ ಮಾಡಿಕೊಳ್ಳುವುದು  ಸಮಸ್ಯೆಯಾಗಿದೆ.    ಇಂತಹ ಲವ್ ಜಿಹಾದ್   ವಿವಾಹಗಳು ಕೇರಳದಲ್ಲಿ  ಹೆಚ್ಚು ನಡೆಯುತ್ತಿವೆ ಎಂದು   ಅವರು ಹೇಳಿದ್ದಾರೆ.  

ತಮ್ಮನ್ನು  ಬಲವಂತದಿಂದ ಮತಾಂತರಗೊಳಿಸಿದ್ದಾರೆ  ಎಂದು  ಹಲವು ಯುವತಿಯರು ತಮಗೆ  ಪತ್ರ ಬರೆದಿದ್ದಾರೆ ಎಂದು   ರೇಖಾ ಶರ್ಮಾ ಹೇಳಿದ್ದಾರೆ.   

ಅನ್ಯ ಧರ್ಮದ ಯುವತಿಯರನ್ನು  ಲವ್ ಜಿಹಾದ್  ಹೆಸರಿನಲ್ಲಿ ಬಲವಂತವಾಗಿ ವಿವಾಹವಾಗಿ  ಅವರನ್ನು  ವಿದೇಶಗಳಿಗೆ ಕರೆದೊಯ್ದು  ಲೈಂಗಿಕ  ವಸ್ತುಗಳಂತೆ  ಬಳಸಿಕೊಳ್ಳುತ್ತಿದ್ದಾರೆ, ಕೇರಳ ಸರ್ಕಾರದೊಂದಿಗೆ,   ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಅವರೂ ಸಹ  ಈನಿಟ್ಟಿನಲ್ಲಿ  ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.