ಬೆಳಗಾವಿ: ರಾಸುಗಳಿಗೆ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 27:  ಖಾನಾಪೂರ ತಾಲ್ಲೂಕಿನ ಹಿಂಡಲಗಿ ಗ್ರಾಮದಲ್ಲಿ  ಮಂಗಳವಾರ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಜಾಗೃತಿ ಕಾಯರ್ಾಗಾರ ಹಮ್ಮಿಕೊಳ್ಳಲಾಗಿತ್ತು.  

ತಾಲೂಕಿನ ಒಟ್ಟು 10 ಗುಂಪು ಗ್ರಾಮಗಳಲ್ಲಿ ಈ ಯೋಜನೆಯನ್ನು ಸಪ್ಟೆಂಬರ ತಿಂಗಳಿನಿಂದ  ಅನುಷ್ಠಾನಗೊಳಿಸಿದ್ದು ಮಾಚರ್್ ಅಂತ್ಯದವರೆಗೆ ಸುಮಾರು 5000 ಹೈನುರಾಸುಗಳಿಗೆ ಉಚಿತವಾಗಿ ಕೃತಕ ಗರ್ಭಧಾರಣೆ ಮಾಡಿ ಕನಿಷ್ಠ 200 -250 ರಾಸುಗಳು ಗರ್ಭಧರಿಸುವಂತೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ನಿದರ್ೆಶಕ ಡಾ.ಗುರುರಾಜ ಮನಗೂಳಿ ತಿಳಿಸಿದರು.  

ಈ  ಕಾರ್ಯಕ್ರಮದಡಿಯಲ್ಲಿ  ಬರುವ ಗ್ರಾಮಗಳಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ, ಜಾಗೃತಿ ಶಿಬಿರ ಏರ್ಪಡಿಸಿ ರೈತರಿಗೆ ಮಾಹಿತ ನೀಡಲಾಗುತ್ತಿದೆ. ರಾಸುಗಳಲ್ಲಿಯ ಒಳ ಮತ್ತು ಹೊರ ಪರೋಪ ಜೀವಿಗಳ ವಿರುದ್ಧ ಔಷಧೋಪಚಾರ ಮಾಡಿ ರಾಸುಗಳನ್ನು ಸದೃಢಗೊಳಿಸಿ,ಯೋಗ್ಯ ಬೆದೆಗೆ ಬಂದು, ಕೃತಕ ಗರ್ಭಧಾರಣೆಗೆ ಅಣಿಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. 

ಅಂದು ಬೆಳಗಿನ 8 ರಿಂದ 10 ಗಂಟೆ ವರೆಗೆ ಏರ್ಪಡಿಸಿದ್ದ ಬರಡು ರಾಸು ಚಿಕಿತ್ಸಾ ಶಿಬಿರದಲ್ಲಿ 63 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು.ಡಾ.ಸಂಗಾನಟ್ಟಿ ಅವರು ಶಿಬಿರದ ನೇತೃತ್ವ ವಹಿಸಿದ್ದರು. 

ಹಿಂಡಲಗಿ ಗ್ರಾಮದಲ್ಲಿ ಆತ್ಮ ಯೋಜನೆಯಡಿ ಒಳ ಮತ್ತು ಹೊರಪರೋಪಜೀವಿಗಳ ವಿರುದ್ಧ ಔಷಧೋಪಚಾರದ ಪ್ರಾತ್ಯಕ್ಷಿಕೆ ಮಾಡಿ, ಔಷಧಗಳನ್ನು ವಿತರಿಸಲಾಯಿತು.  ಬೀಡಿಯ ರೈತ ಸಂಪರ್ಕ ಕೇಂದ್ರದ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಕೃಷಿ ತಂತ್ರಜ್ಞರು ಮೆಣಸಿನಕಾಯಿ ಬೆಳೆಯ ಕುರಿತು ಉಪನ್ಯಾಸ ನೀಡಿದರು. ಸುಮಾರು 50 ಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದ ಲಾಭ ಪಡೆದರು.