ಯಮಕನಮರಡಿ 9: ಸಮೀಪದ ನರಸಿಂಗಪೂರ ಗ್ರಾಮದಲ್ಲಿ ಗುರುವಾರ ದಿ,9 ರಂದು ವಿವಿಧ ಕಾಮಗಾರಿಗಳಿಗೆ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೋಳಿ ಚಾಲನೆ ನೀಡಿದರು 2019-20 ನೇಯ ಸಾಲಿನ 5054-04-337-001-422 ಎಸ,ಸಿ,ಪಿ ಯೋಜನೆಯಡಿಯಲ್ಲಿ ಗ್ರಾಮದ ಎಸ್,ಸಿ, ಕಾಲನಿಯಲ್ಲಿ ಸುಮಾರು 15 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿ, ನೀರಿನ ಟ್ಯಾಂಕ, ಅದರಂತೆ ನರಸಿಂಗಪೂರ ಗ್ರಾಮದ ಎಸ್,ಸಿ,ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ನಿಮರ್ಾಣ ಕಾಮಗಾರಿಗೆ 1500000.00 ರೂ ಗಳಲ್ಲಿ, 2016-17 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನೂತನವಾಗಿ ನಿಮರ್ಿಸಿದ ಡಾ||ಬಿ.ಆರ್,ಅಂಬೇಡ್ಕರ ಭವನವನ್ನು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ದಡ್ಡಿ ಜಿಲ್ಲಾ ಪಂಚಾಯತನ ಸದಸ್ಯೆ ಶ್ರೀಮತಿ ಮುನಿಷಾ ಪಾಟೀಲ, ತಾ,ಪಂ,ಸದಸ್ಯರಾದ ಸುರೇಶ ಬೆಣ್ಣಿ, ಗ್ರಾಮ ಪಂಚಾಯತನ ಅಧ್ಯಕ್ಷೆ ಸುನೀತಾ ಹರಿಜನ, ಲಕ್ಷ್ಮಣ ಮೇಕಳಿ, ಪ್ರವಿಣ ಚೌಗಲಾ, ಸುನೀಲ ಹುಕ್ಕೆರಿ ಶಿವಾನಂದ ರಾಠೋಡ ಮುಂತಾದವರು ಸುತ್ತಲ್ಲಿನ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.