ನರಗುಂದ ಪಟ್ಟಣ: ತಂಬಾಕು ನಿಯಂತ್ರಣ ಕುರಿತು ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿ


ಗದಗ 31: ಆರೋಗ್ಯ ಇಲಾಖೆ ಹಾಗೂ ಪೋಲೀಸ್ ಇಲಾಖೆ ಸಹಯೋಗದಲ್ಲಿ ನರಗುಂದ ಪಟ್ಟಣದ ಬಸ್ ಸ್ಟಾಂಡ ಸುತ್ತ ಮುತ್ತಲಿನ ಅಂಗಡಿ ಮುಗ್ಗಟ್ಟು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರನ ಕಾಯ್ದೆ ಉಲ್ಲಂಘನೆಯ ವಿರುದ್ಧ ದಿ. 30ರಂದು ದಿಢೀರ ಕಾರ್ಯಾಚರಣೆ ನಡೆಸಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ 2003ರ ಕುರಿತು ಜಾಗೃತಿ ಮೂಡಿಸಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 25 ಪ್ರಕರಣ ದಾಖಲಿಸಿ ಒಟ್ಟು ರೂ 4500 ಗಳನ್ನು ಸಂಗ್ರಹಿಸಲಾಯಿತು, ಧೂಮಪಾನ ಸಿಷೇಧಿತ ನಾಮಫಲಕ ಬಿತ್ತರಿಸದೇ ಇರುವದು, ಸಾರ್ವಜನಿಕ ಸ್ಥಖಗಳಲ್ಲಿ ಧೂಮಪಾನ ಮಾಡುವದು. ತಂಬಾಕು ಉತ್ಪನ್ನಗಳ ಜಾಹಿರಾತು, ಅಂಗಡಿಗಳಲ್ಲಿ ಪ್ರದಶರ್ಿಸುವದು, ಶಾಲಾ/ ಕಾಲೇಜುಗಳ ಸುತ್ತ 100 ಗಜದವರೇಗೆ ತಂಬಾಕು ಮಾರಾಟ ಹಾಗೂ ಬಳಕೆ ಮಾಡುವದು, ಕಂಡುಬಂದಿದ್ದು ಅಂತವರ ವಿರುದ್ಧ ಎಚ್ಚರಿಕೆ ನೀಡಿ ದಂಡ ವಿಧಿಸಲಾಯಿತು ತಂಡದಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯತ್ರಣ ಕೋಶ ಗದಗ, ಎನ್.ಬಿ ಜೋಷಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಆರೋಗ್ಯ ಇಲಾಖೆ, ಆರ್.ಎಂ.ಚನ್ನಶೆಟ್ಟಿ. ಎ.ಎಸ್.ಐ. ಬಿ.ಆರ್.ಸೊರಟೂರ.ಎ.ಎಸ್.ಐ ಹಗೂ ಎಸ್.ವಿ. ಸೈನಾಪೂರ ಪೊಲೀಸ್ ಇಲಾಖೆಯಿಂದ ಉಪಸ್ಥಿತರಿದ್ದರು.