ಬೈಲಹೊಂಗಲ 03: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಪುರುಷರಷ್ಟೇ ಅಲ್ಲ. ಶೇ.50ರಷ್ಟು ಮಾತೃತ್ವದ ಶಕ್ತಿಯು ಮತ ಚಲಾಯಿಸಿದ ಪರಿಣಾಮ ದೇಶದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಕರ್ಾರ ರಚನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೇಂದ್ರ, ರಾಜ್ಯ ರೈಲ್ವೇ ಸಚಿವ ಸುರೇಶ ಅಂಗಡಿ ಹೇಳಿದರು.
ಪಟ್ಟಣದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ನಿವಾಸದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಅಮೇರಿಕಾದಲ್ಲಿ ಚುನಾವಣೆಯಾದರೆ ಅಧ್ಯಕ್ಷರು ಯಾರು ಆಗುತ್ತಾರೆಂದು ಇಡೀ ಜಗತ್ತು ನೋಡುತ್ತಿತ್ತು. ಆದರೆ ಈಗ ಭಾರತದ ಪ್ರಧಾನಮಂತ್ರಿ ಯಾರು ಆಗುತ್ತಾರೆಂದು ಇಡೀ ಜಗತ್ತು ಕಾದು ನೋಡಿ ನರೇಂದ್ರ ಮೋದಿ ಎರಡನೇ ಭಾರಿ ಪ್ರಧಾನಿಯಾಗಿರುವುದನ್ನು ಕಣ್ತುಂಬಿ ಕೊಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇರಿಕಾ, ಮಲೇಷಿಯಾ, ದುಬೈ, ಜರ್ಮನ್, ಬೇರೆ, ಬೇರೆ ರಾಷ್ಟ್ರಗಳಲ್ಲಿರುವ ಆನಿವಾಸಿ ಭಾರತೀಯರು ಬಂದು ಮತ ಚಲಾಯಿಸಿದರುವುದು ಇತಿಹಾಸದ ಪುಟಗಳಲ್ಲಿ ಇದೇ ಮೊದಲನೇ ಬಾರಿಯಾಗಿದೆ ಎಂದರು.
ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ದೂರವಾಣಿ ಕರೆ ಮಾಡಿ ತಾವು ಯಾರಿಗಾದರೂ ಮತ ಚಲಾಯಿಸಬೇಕಿದ್ದರೆ ನರೇಂದ್ರ ಮೋದಿ ಅವರಿಗೆ ಮತ ನೀಡಿ ಎಂದು ಹೇಳಿದ್ದು ವಿಶೇಷವಾಗಿತ್ತು. ಲೋಕಸಭಾ ಚುನಾವಣೆ ವೇಳೆ ವಿರೋಧ ಪಕ್ಷದವರು ಏನೇ ಆರೋಪ, ಗೊಂದಲ ಸೃಷ್ಠಿ ಮಾಡಿದರೂ ಜನರು ಯಾವುದನ್ನು ತಲೆಗೆ ಹಾಕಿಕೊಳ್ಳದೆ ಬಿಜೆಪಿ ಅಭ್ಯಥರ್ಿಗಳನ್ನು ಗೆಲ್ಲಿಸಿ ಜನ ಸೇವೆಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಯುಗ ಆರಂಭವಾಗಿದೆ. ಒಂದು ಮೋದಿ ಅವರ ಕಾರ್ಯ ಕಳೆದ ಐದು ವರ್ಷಗಳಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಜನರ ಬಾಗಿಲಿಗೆ ಮುಟ್ಟಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರಕಿದೆ. ಉಜ್ವಲ ಯೋಜನೆಯಲ್ಲಿ ಎಲ್ಲರಿಗೂ ಉಚಿತವಾಗಿ ಗ್ಯಾಸ್ ವಿತರಣೆ ಮಾಡಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿದ್ದಾರೆ. ಕೇಂದ್ರದಲ್ಲಿ ಚಿಕ್ಕೋಡಿ ಭಾಗಕ್ಕೆ ಮಂತ್ರಿ ಸ್ಥಾನ ದೊರಕುತ್ತಿತ್ತು. ಈ ಬಾರಿ ಬೆಳಗಾವಿಗೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಸಚಿವ ಸುರೇಶ ಅಂಗಡಿ ಅವರು ಆಧುನಿಕ ಬಸವಣ್ಣನಂತೆ. ಈ ಭಾಗದಲ್ಲಿ ನಿರುದ್ಯೋಗ ನಿವಾರಣೆ ಮಾಡಲು ಉದ್ಯೋಗ ಸೃಷ್ಠಿ ಮಾಡಬೇಕು ಎಂದು ಮನವಿ ಮಾಡಿದರು.
ವೇದಿಕೆ ಮೇಲೆ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಕೆಎಲ್ಇ ನಿದರ್ೇಶಕ ಎಂ.ಸಿ.ಮೆಟಗುಡ್ಡ, ಈರಯ್ಯಸ್ವಾಮಿ ಹಿರೇಮಠ, ಮುರುಳಿಧರ ಮಾಳೋದೆ, ಬಿ.ಎಂ.ಚಿಕ್ಕನಗೌಡರ, ಸಿದ್ಧಪ್ಪ ಮರಕುಂಬಿ ಇದ್ದರು.
ನೂತನ ಸಚಿವರನ್ನು ಸತ್ಕರಿಸಲಾಯಿತು. ಮುಖಂಡರಾದ ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಶಿವಾನಂದ ಬಡ್ಡಿಮನಿ, ನಾಗರಾಜ ಮರಕುಂಬಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ಬಾಕ್ಸ್ ಐಟಂ:
ನೀ ಕೆಲಸಾ ಮಾಡಿಲ್ಲ. ನಿನಗೆ ಟಿಕೇಟ್ ಕೊಡುವುದಿಲ್ಲ ಎನ್ನುತ್ತಿದ್ದರು ಡಾ.ಪ್ರಭಾಕರ ಕೋರೆ. ನನಗೆ ಟಿಕೆಟ್ ಕೊಡಲಿಲ್ಲ ಅಂದರೆ ನೀವಾದರೂ ನಿಲ್ಲಿ ಅಂದೆ. ಕೊನೆ ಘಳಿಗೆಯಲ್ಲಿ ಟಿಕೆಟ್ ಘೋಷಣೆಯಾಯಿತು ಎಂದು ಸುರೇಶ ಅಂಗಡಿ ಅವರು ಸಭೆಯಲ್ಲಿ ಹೇಳುತ್ತಿದ್ದಂತೆ ಹಾಸ್ಯದ ಹೊನಲು ಹರಿಯಿತು.