ನರೇಂದ್ರ ಮೋದಿ ಶೋಮ್ಯಾನ್; ಶಶಿಥರೂರ್ ಲೇವಡಿ

ನವದೆಹಲಿ, ಏ ೩,  ದೇಶದಿಂದ  ಕೊರೊನಾ ಅಂಧಕಾರವನ್ನು  ಓಡಿಸಲು  ಏಪ್ರಿಲ್  ೫ರ ರಾತ್ರಿ  ೯ ಗಂಟೆಗೆ,  ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗಿಸೋಣ, ಎಂದು  ಪ್ರಧಾನಿ ನರೇಂದ್ರ ಮೋದಿ  ನೀಡಿರುವ ಕರೆಯನ್ನು...   ಇದೊಂದು  ಒಳ್ಳೆಯ  ಕ್ಷಣ ಮಾತ್ರದ  ಹೇಳಿಕೆ   ಎಂದಿರುವ   ಕಾಂಗ್ರೆಸ್  ನಾಯಕ  ಶಶಿಥರೂರ್,   ಜನರು ಅನುಭವಿಸುತ್ತಿರುವ ಸಂಕಷ್ಟ , ಆತಂಕ ನಿವಾರಿಸುವಂತಹ ಯಾವುದೇ   ಕ್ರಮ ಪ್ರಕಟಿಸಿಲ್ಲ ಎಂದು ಟೀಕಿಸಿದ್ದಾರೆ. ಜನರ  ಸಂಕಷ್ಟ,  ಅವರ  ಬದುಕುಗಳ ಮೇಲಿನ ಒತ್ತಡ, ಆರ್ಥಿಕ ಸ್ಥಿತಿಗತಿಯ  ಬಗ್ಗೆ  ಪ್ರಧಾನಿ ಯಾವುದೇ  ಕಳಕಳಿ  ವ್ಯಕ್ತಪಡಿಸಿಲ್ಲ.  ಭವಿಷ್ಯದ ಮುನ್ನೋಟ ಏನು?. ಲಾಕ್ ಡೌನ್  ಹಿಂಪಡೆದ ನಂತರ  ಪರಿಸ್ಥಿತಿ  ಸುಧಾರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದರ  ಬಗ್ಗೆ  ಪ್ರಧಾನಿ  ಏನನ್ನೂ  ಉಲ್ಲೇಖಿಸಿಲ್ಲ ಎಂದು  ಟೀಕಿಸಿದ್ದಾರೆ.  ಮೋದಿ  ಒಬ್ಬ  ಪ್ರಧಾನ  ಶೋಮ್ಯಾನ್ ಹಾಗೂ ಫೋಟೋಗಳಿಗೆ ಸೀಮಿತಗೊಂಡ  ಪ್ರಧಾನಿ ಎಂದು ಟ್ವೀಟ್ ನಲ್ಲಿ  ಲೇವಡಿ ಮಾಡಿದ್ದಾರೆ.