ಜಿಲ್ಲೆಯಲ್ಲಿ ನರೇಗಾ ಯೋಜನೆ ಮುಂಚೂಣಿಯಲ್ಲಿ: ಸಿಇಓ

ಬಾಗಲಕೋಟೆ22: ನರೇಗಾ ಯೋಜನೆಯಡಿ ಕೆರೆ, ಶಾಲಾ ಆಟದ ಮೈದಾನ, ಶಾಲಾ ಕಂಪೌಂಡ್, ಕುರಿ ದೊಡ್ಡಿ, ಕೃಷಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಪ್ರತಿದಿನ 12 ಸಾವಿರದಿಂದ 15 ಸಾವಿರದವರೆಗೆ ಕೂಲಿ ಕಾರ್ಮಿಕರು  ಕೆಲಸ ಮಾಡುತ್ತಿರುವುದಾಗಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದರು.

ಮಂಗಳವಾರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕರ ಕಚೇರಿಯಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಗಾ ಯೋಜನೆಯಡಿ 38.85 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಒಟ್ಟು 31.45 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ.80.96 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯು 8ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಅನುಮೋದನೆಗೊಂಡ 5044 ಕುರಿ ದೊಡ್ಡಿಗಳ ಪೈಕಿ 1114 ಕಾಮಗಾರಿಗಳು ಪೂರ್ಣಗೊಂಡಿವೆ. 162 ಕೆರೆ ಅಭಿವೃದ್ದಿ ಕಾಮಗಾರಿಗಳ ಪೈಕಿ 34 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. 256 ಶಾಲಾ ಕಂಪೌಂಡ್ ಕಾಮಗಾರಿಗಳ ಪೈಕಿ 66 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 161 ಕಾಮಗಾರಿ ಪ್ರಗತಿಯಲ್ಲಿವೆ. 198 ಶಾಲಾ ಆಟದ ಮೈದಾನ ಕಾಮಗಾರಿಗಳಲ್ಲಿ 69 ಪೂರ್ಣ, 86 ಪ್ರಗತಿಯಲ್ಲಿವೆ. ನರೇಗಾ ಮತ್ತು ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವಿಕೆಯಡಿ 170 ಶಾಲಾ ಶೌಚಾಲಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ 163 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ 212.85 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

ನೆರ ಹಾವಳಿಗೆ ತುತ್ತಾದ 111 ಸಿ.ಸಿ ರಸ್ತೆ, 67 ಚರಂಡಿ, 18 ಬಸಿ ಕಾಲುವೆ, 17 ಶಾಲಾ ಕಂಪೌಂಡ್, 16 ಆಟದ ಮೈದಾನ, 12 ಚೆಕ್ಡ್ಯಾಂ, 12 ಸಿಡಿ, 16 ಶೌಚಾಲಯ ದುರಸ್ಥಿ, 15 ಸ್ಮಶಾನ ಅಭಿವೃದ್ದಿ, 11 ಕೃಷಿ ಹೊಂಡ ಹಾಗೂ 2 ಘನ ತ್ಯಾಜ್ಯ ವಿಲೇವಾರಿ ಸೇರಿ ಒಟ್ಟು 565 ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ಒಟ್ಟು 789.06 ಲಕ್ಷ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) :

ಸ್ವಚ್ಛ ಭಾರತ ಮಿಷನ್ದಡಿ ಬೇಸ್ಲೈನ್ ಸವರ್ೇ ನಂತರ ಬಿಟ್ಟು ಹೋದ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು 10543 ಗುರಿ ಹೊಂದಲಾಗಿದ್ದು, ಈ ಪೈಕಿ 4987 ಶೌಚಾಲಯ ನಿಮರ್ಿಸಲಾಗಿದ್ದು, 5556 ಶೌಚಾಲಯಗಳು ಪ್ರಗತಿಯಲ್ಲಿವೆ. 238 ಅಂಗನವಾಡಿಗಳ ಪೈಕಿ 60 ಅಂಗನವಾಡಿಗಳಿಗೆ ಶೌಚಾಲಯ ನಿಮರ್ಿಸಲಾಗಿದ್ದು, ಉಳಿದ 178 ಪ್ರಗತಿಯಲ್ಲಿವೆ. 28 ಶಾಲೆಗಳಲ್ಲಿ ಶೌಚಾಲಯ ನಿಮರ್ಾಣಕ್ಕೆ ಗುರಿ ಹೊಂದಲಾಗಿದ್ದು, 18 ಶೌಚಾಲಯ ನಿರ್ಮಾನಿಸಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನು 570 ಶಾಲಾ ಶೌಚಾಲಯ ನಿಮರ್ಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಡಿಮೆ ಪ್ರಗತಿ ಸಾಧಿಸಿದ, ನರೇಗಾದಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಜಿಲ್ಲೆಯ 6 ಗ್ರಾ.ಪಂ ಅಧಿವೃದ್ದಿ ಅಧಿಕಾರಿಗಳ ವಾಷರ್ಿಕ ವೇತನ ಬಡ್ತಿ ಕಡಿತಗೊಳಿಸಲಾಗಿದೆ.

 ಅಲ್ಲದೇ ನರೇಗಾ ಯೋಜನೆಯಡಿ ಅವ್ಯವಹಾರ ಮಾಡಿ ಸಾಭಿತಾದ ಜಮಖಮಡಿ ತಾಲೂಕಿನ ಪಿಡಿಓ ಪಿ.ಪಿ.ರಾವಳ ಅವರ 2 ವಾರ್ಷಿಕ  ವೇತನ ಬಡ್ತಿಗಳನ್ನು ಖಾಯಂ ತಡೆಹಿಡಿಲಯ ಆದೇಶಿಸಿದೆ. ಹುನಗುಂದ ತಾ.ಪನ ಎಂ.ಆರ್.ದೊಡ್ಡಮನಿ, ಎಸ್.ಪಿ.ನಂಜಯ್ಯನಮಠ ಅವರನ್ನು ಕರ್ತವ್ಯ ಲೋಪ ಆಪಾದನೆ ಮೇಲೆ ಅಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು :

ಜಿಲ್ಲೆಯಲ್ಲಿ ಒಟ್ಟು 790 ಶುದ್ದ ನೀರಿನ ಘಟಕಗಳು ಅಳವಡಿಸಲಾಗಿದ್ದು, ಅವುಗಳಲ್ಲಿ 616 ಚಾಲ್ತಿಯಲ್ಲಿದ್ದು, 174 ದುರಸ್ತಿಯಲ್ಲಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಒಟ್ಟು 41 ಯೋಜನೆ ತೆಗೆದುಕೊಳ್ಳಲಾಗಿದ್ದು, ಈಗಾಗಲೇ 38 ಪೂರ್ಣಗೊಂಡಿದ್ದು, 2 ಯೋಜನೆಗಳು ಪ್ರಗತಿಯಲ್ಲಿರುತ್ತವೆ. 1 ಯೋಜನೆ ಸಾಂಕೇತಿಕವಾಗಿ ಪ್ರಾರಂಭವಾಗಿದೆ.

ಸಂಜೀವಿನಿ ಎನ್.ಆರ್.ಎಲ್.ಎಂ :

ಎನ್.ಆರ್.ಎಲ್.ಎಂ ಯೋಜನೆಯಡಿ 2019-20ನೇ ಸಾಲಿಗೆ ನೀಡಿದ ಭೌತಿಕ ಗುರಿಗೆ ಅನುಗುಣವಾಗಿ ಎಲ್ಲ ಚಟುವಟಿಕೆಗಳಲ್ಲಿ ಶೇ.100 ರಷ್ಟು ಸಾಧನೆಯಾಗಿದ್ದು, ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯು 3ನೇ ಸ್ಥಾನದಲ್ಲಿರುತ್ತದೆ. ಈ ಯೋಜನೆಯಡಿ 260 ಗ್ರಾಮೀಣ ಯುವಕ-ಯುವತಿಯರಿಗೆ ವಿವಿಧ ಕೋರ್ಸಗಳಿಗೆ ಸ್ವ-ಉದ್ಯೋಗ ತರಬೇತಿ ಹಾಗೂ ಬ್ಯಾಂಕ್ ಸಾಲ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ಲಾಸಿಕ್ ಮುಕ್ತ ಅಭಿಯಾನದಡಿ ಜಿಲ್ಲಾ ಮಟ್ಟದಲ್ಲಿ ಒಂದು ದಿನ ಬಟ್ಟೆ ಬ್ಯಾಗ್ ಮೇಳ ಹಮ್ಮಿಕೊಳ್ಳಲಾಗಿತ್ತು ಎಂದರು.

ಗುರುಗಳು ಬಂದರು ಗುರುವಾರ :

ಕಳೆದ ವರ್ಷ ಬಾಗಲಕೋಟೆ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ.75.63 ರಷ್ಟಾಗಿ ರಾಜ್ಯಕ್ಕೆ 27 ಸ್ಥಾನ ಪಡೆದಿದ್ದು, ಪ್ರಸಕ್ತ ಸಾಲಿಗೆ ಫಲಿತಾಂಶದಲ್ಲಿ ಸುಧಾರಣೆ ತರಲು ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಜಿಲ್ಲೆಯ 27 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನಿಯೋಜಿಸಿ ಆದೇಶಿಸಲಾಗಿದೆ. 

ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಪ್ರತಿ ಗುರುವಾರ ಭೇಟಿ ನೀಡಲಿದ್ದಾರೆ. 

        ಇದಕ್ಕೆ ಗುರುಗಳು ಬಂದರು ಗುರುವಾರ ಎಂದು ಹೆಸರು ಇಡಲಾಗಿದೆ. ಅಲ್ಲದೇ ಇವರು ಅನಿರೀಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮೂಲಭೂತ ಸೌಲಭ್ಯಗಳನ್ನು ಹಾಗೂ ಶೈಕ್ಷಣಿ ಗುಣಮಟ್ಟವ ಬಗ್ಗೆ ಪರಿಶೀಲಿಸಿ ಅವುಗಳ ಸುಧಾರಣೆಗೆ ಸಲಹೆ ಸೂಚನೆ ನೀಡಲಿದ್ದಾರೆ.

ಮಾತೃವಂದನಾ, ಮಾತೃಶ್ರೀ ಮಾತೃಪೂರ್ಣ :

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ 12100 ಗುರಿ ಪೈಕಿ ಆನ್ಲೈನ್ನಲ್ಲಿ 8923 ಫಲಾನುಭವಿಗಳು ನೋಂದಣಿಯಾಗಿದ್ದು, ಶೇ.74 ರಷ್ಟು ಪ್ರಗತಿ ಸಾಧಿಸಲಾಗಿದೆ. ಮಾತೃಶ್ರೀ ಯೋಜನೆಯಡಿ 18398 ಗುರಿ ಇದ್ದು,ಈ ಪೈಕಿ 16510 ಗುರಿ ಸಾಧಿಸಿ, 89.74 ಪ್ರತಿಶತ ಸಾಧನೆ ಮಾಡಲಾಗಿದೆ. ಮಾತೃಪೂರ್ಣ ದಡಿ 44059 ಗುರಿ ಇದ್ದು, ಈ ಪೈಕಿ 40952 ಗುರಿ ಸಾಧಿಸಿ ಪ್ರತಿಶತ 92 ರಷ್ಟು ಸಾಧನೆ ಮಾಡಲಾಗಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಸಕರ್ಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆ 18.11 ಲಕ್ಷ ರೂ. ಖಚರ್ು ಮಾಡುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಎಂಬ ಸ್ಟಿಕರ್ಗಳನ್ನು ಬಿಡುಗಡೆ ಮಾಡಿದರು.