ಜಿಲ್ಲಾಡಳಿತದಿಂದ ನಾರಾಯಣ ಗುರು ಜಯಂತಿ

ಹಾವೇರಿ13: ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿಯನ್ನು ಜಿಲ್ಲಾಡಳಿತದಿಂದ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಪುಷ್ಪಾರ್ಚನೆ ಮೂಲಕ ಶ್ರದ್ಧಾಪೂರ್ವಕವಾಗಿ ನಮಿಸಿದರು 

    ನೆರೆ ಹಾಗೂ ಅತಿವೃಷ್ಠಿ ಕಾರಣ ಸಮಾಜದ ಮುಖಂಡರ ಅಭಿಪ್ರಾಯದಂತೆ ಬ್ರಹ್ಮಶ್ರೀ ನಾರಾಯಣಗುರಗಳ ಜಯಂತಿಯನ್ನು ಸರಳವಾಗಿ ಆಯೋಜಿಸಲಾಯಿತು. ಜಯಂತಿಗೆ ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಯಿತು.

     ಸರಳ ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕಿ ಶಶಿಕಲಾ ಹುಡೇದ.ಹಾವೇರಿ ಶಹರ ಪೊಲೀಸ್ ಠಾಣೆಯ ಸಿ.ಪಿ.ಐ. ಎಮ್.ಗೌಡ್ಡಪ್ಪಗೌಡ, ರಾಜ್ಯ ಈಡಿಗ ಸಮಾಜದ ಮುಖ್ಯಸ್ಥರಾದ ಸತೀಶ. ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ಎಮ್.ಎಲ್ ಲಿಂಗರಾಜ ಹಾಗೂ ಇತರ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.