ಲೋಕದರ್ಶನ ವರದಿ
ಬೆಳಗಾವಿ:
91 ನೇ ನಾಡಹಬ್ಬ ಉತ್ಸವನ್ನು ಅ.11 ರಿಂದ 5 ದಿನಗಳ
ಕಾಲ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಆಯೋಜಿಸಲಾಗಿದೆ
ಎಂದು ಡಾ.ಸಿದ್ದಗೌಡ
ಪಾಟೀಲ ಹೇಳಿದರು.
ಸೋಮವಾರ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕನ್ನಡ ಏಕೀಕರಣ ಸಲುವಾಗಿ ಮರಣಹೊಂದಿದ ಮಹಾನ್
ನಾಯಕರು ಹಾಗೂ ಗಣ್ಯರನ್ನು ನೆನೆಸುವ
ದಿನವಾಗಿ ನಾಡಹಬ್ಬವನ್ನು ಹಮ್ಮಿಕೋಳ್ಳಲಾಗಿದೆ ಎಂದರು.
ಐದು
ದಿನಗಳ ಕಾಲ ನಡೆಯುವ ನಾಡಹಬ್ಬಕ್ಕೆ
ಸಾವಿರಾರೂ ಕನ್ನಡ ಅಭಿಮಾನಿಗಳು ಪಾಲ್ಗೊಂಡು ಈ ಹಬ್ಬಕ್ಕೆ ಮೆರಗು
ತರಬೇಕೆಂದರು. ಕನ್ನಡ ಅಭಿವೃದ್ಧಿ ಹಾಗೂ ಕನ್ನಡ ಬೆಳಿಸುವ
ನಿಟ್ಟಿನಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ.
ಬಾಂಗ್ಲಾ ನುಸುಳುಕೋರಿಕೆ ಕಡಿವಾಣ ಹಾಗೂ ಅಕ್ರಮವಾಗಿ ಮಾದಕ
ದ್ರವ್ಯ ವ್ಯಸನಗಳನ್ನು ಮಾರಾಟ ಮಾಡುವವರ ವಿರೋದಿಸಿ ಈ ಸಮಾರಂಭದಲ್ಲಿ ಚಚರ್ೆ
ಮಾಡಿ ಅವರಿಗೆ ಗಡಿಪಾರು ಮಾಡುವಂತೆ ರಾಜ್ಯಕ್ಕೆ ಒತ್ತಾಯ ಮಾಡಲಾಗುವುದು ಎಂದು ಸಿದ್ದನಗೌಡ ಪಾಟೀಲ
ಹೇಳಿದರು.
ಈ ಸಂದರ್ಭದಲ್ಲಿ ಸುಜಾತಾ ವಾಳಾರ, ವಿಜಯಾ ಹಿರೇಮಠ, ಜ್ಯೋತಿ ಬದಾಮಿ, ಗುರುನಗೌಡ ಪಾಟೀಲ, ಮೋಹನ ಗುಂಡ್ಲಳೂರ, ಡಾ.ರಾಜಶೇಖರ, ಸಿ ಕೆ.ಜೋರಾಪುರ,
ಆರ್ ಪಾಟೀಲ ಹಾಗೂ ಉಪಸ್ಥಿತರಿದ್ದರು.