ನಂದಾ ಪಾಟೀಲರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಲೋಕದರ್ಶನ ವರದಿ

ವಿಜಯಪುರ 12: ಮೇರು ಗಾಯಕಿ, ಅಧ್ಯಾಪಕಿ, ಉತ್ತರ ಕನರ್ಾಟಕದ ಹೆಮ್ಮೆಯ ಹಾಗೂ ಹಿರಿಯ ಹಿಂದೂಸ್ತಾನಿ ಗಾಯಕಿ ಡಾ.ನಂದಾ ಪಾಟೀಲ ನಾಲ್ಕು ದಶಕಗಳ ಸಂಗೀತ ಸೇವೆಯನ್ನು ಪರಿಗಣಿಸಿ,  ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತನ್ನ ಹತ್ತನೆಯ ಘಟಿಕೋತ್ಸವದಲ್ಲಿ ಡಾ.ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. 

'ಶಿಕ್ಷಣದ ಕಾಶಿ' ಎನಿಸಿದ ಧಾರವಾಡದಲ್ಲಿ ಜನಿಸಿದ ನಂದಾ ಪಾಟೀಲರಿಗೆ ಸಾಹಿತ್ಯ, ಸಂಗೀತ ಹಾಗೂ ಲಲಿತ ಕಲೆಗಳ ವಾತಾವರಣವು ಬಾಲ್ಯದಲ್ಲಿಯೇ ಸಹಜವಾಗಿ ದೊರೆಯಿತು. ತಮ್ಮ 8ನೆಯ ವರ್ಷದಿಂದಲೇ ಸಂಗೀತ ಕಲಿಯಲು ಆರಂಭಿಸಿದರು. ಸಂಗೀತ ಕೇವಲ ಹವ್ಯಾಸಕ್ಕಾಗಿ ಕಲಿಯದೆ, ವೃತ್ತಿಪರ ಸಂಗೀತ ಕಲಿಯುವ ಉದ್ದೇಶದಿಂದ ಕನರ್ಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಬಿ.ಮ್ಯೂಸಿಕ್ ಪದವಿಯನ್ನು 1984ರಲ್ಲಿ ಚಿನ್ನದ ಪದಕ ಹಾಗೂ ಅತ್ಯುನ್ನತ ದಜರ್ೆಯೊಂದಿಗೆ ಪೂರೈಸಿದರು.  ಎಂ.ಮ್ಯೂಸಿಕ್ 1986ರಲ್ಲಿ ಕನರ್ಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕು ಗಳಿಸುವ ಮೂಲಕ ಮುಗಿಸಿದರು. ಸಂಗೀತ ವಿಷಯದಲ್ಲಿ ಸಂಶೋಧನೆಯನ್ನು ಮುಂದುವರೆಸಿ, ಜಾನಪದ ಸಂಗೀತದಲ್ಲಿ ಕನರ್ಾಟಕ ವಿಶ್ವವಿದ್ಯಾಲಯ ಧಾರವಾಡದಿಂದ 1997ರಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.

ವೃತ್ತಿಯಿಂದ ಕನರ್ಾಟಕ ಕಾಲೇಜ ಧಾರವಾಡದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ.ನಂದಾ ಪಾಟೀಲರು ಪ್ರವೃತ್ತಿಯಿಂದ ಹಿಂದುಸ್ತಾನಿ ಹಾಗೂ ಸುಗಮ ಸಂಗೀತದ ಖ್ಯಾತ ಗಾಯಕಿಯಾಗಿದ್ದಾರೆ. ಡಾ.ನಂದಾ ಪಾಟೀಲರು 'ಅಕ್ಕ ಕೇಳವ್ವಾ ಧ್ವನಿ ಸುರಳಿಯ ಮೂಲಕ ಕನರ್ಾಟಕದ ಮನೆಮಾತಾದರು. ಆ ನಂತರ 'ಎನ್ನೊಡೆಯಾ ಸಂಗಮನಾಥ' ಹಾಗೂ 'ಸಲಹು ಕೂಡಲ ಸಂಗಮದೇವ' ವಚನ ಧ್ವನಿ ಸಾಂದ್ರಿಕೆಗಳನ್ನು ಬಿಡುಗಡೆ ಮಾಡಿ, ಆ ಮೂಲಕ ಖ್ಯಾತ ವಚನ ಸಂಗೀತದ ಗಾಯಕಿಯೆಂದು ಕರೆಯಿಸಿಕೊಂಡರು.

ಸಂಗೀತದ ಅಧ್ಯಾಪಕಿಯಾಗಿ ಶೈಕ್ಷಣಿಕ ವಲಯದಲ್ಲಿಯೂ ಡಾ.ನಂದಾ ಪಾಟೀಲರು ಪ್ರಖ್ಯಾತರಾಗಿದ್ದಾರೆ. ಸಂಗೀತದ ಮೇರು ವ್ಯಕ್ತಿತ್ವವಾದ 'ಬಸವರಾಜ ರಾಜಗುರು' ಪುಸ್ತಕವನ್ನು 2009ರಲ್ಲಿ ಬರೆದು ಪ್ರಕಟಿಸಿದ್ದಾರೆ. ಜಾನಪದ ಗಾಯಕ ಶ್ರೀ ಬಾಳಪ್ಪ ಹುಕ್ಕೇರಿಯವರ ಕುರಿತು ಕೃತಿಯೊಂದನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ 2010ರಲ್ಲಿ ಪ್ರಕಟಿಸಿದ್ದಾರೆ. 'ಸ್ವರಯಾತ್ರೆ 2013ರಲ್ಲಿ ಪ್ರಕಟವಾದ ಸಂಗೀತದ ಕುರಿತ ಶ್ರೇಷ್ಟವಾದ ಕೃತಿಯಾಗಿದೆ. 

ಕನರ್ಾಟಕ ಕಾಲೇಜಿನಲ್ಲಿ ಸಂಗೀತ ಬೋಧನೆ ಮಾಡುತ್ತ, ಪಿಎಚ್ಡಿ ಮಾರ್ಗದರ್ಶಕಿಯಾಗಿಯೂ ಸೇವೆಯಲ್ಲಿದ್ದಾರೆ. ಸಂಗೀತದ ಕುರಿತು ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಿಸುತ್ತಾ ಬಂದಿದ್ದಾರೆ. 

ಡಾ.ನಂದಾ ಪಾಟೀಲರು ದೇಶದ ನಾನಾ ಪ್ರದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಕನರ್ಾಟಕ ಸಕರ್ಾರವು ಆಯೋಜಿಸಿದ ಮೈಸೂರು ದಸರಾ, ಕದಂಬೋತ್ಸವ, ನವರಸಪುರ ಉತ್ಸವ, ಹಂಪಿ ಉತ್ಸವ ಹಾಗೂ ವಚನ ಸಂಗೀತೋತ್ಸವಗಳಲ್ಲಿ ಪ್ರದರ್ಶನ ನೀಡಿ ಜನಮೆಚ್ಚುಗೆ ಪಡೆದಿದ್ದಾರೆ. ಹೈದ್ರಾಬಾದ್, ಮುಂಬೈ, ಲಕನೌ, ಹರಿದ್ವಾರ, ತಿರುವನಂತಪುರ, ಅಣ್ಣಾಮಲೈ ಮುಂತಾದ ನಗರಗಳಲ್ಲಿ ಸಹಸ್ರಾರು ಕೇಳುಗರಿಗೆ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಡಾ.ನಂದಾ ಪಾಟೀಲರಿಂದ ಸಂಗೀತ ಅಭ್ಯಾಸ ಮಾಡಿದ ವಿದ್ಯಾಥರ್ಿಗಳು ಇಂದು ದೇಶದ ವಿವಿಧೆಡೆ ಖ್ಯಾತ ಸಂಗೀತಗಾರರಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. 

ಸಂಗೀತದ ಮೂಲಕ ನೀಡಿದ ಸಮಾಜ ಸೇವೆಯನ್ನು ಗುರುತಿಸಿ ಉಜ್ಜಯಿನಿ ಪೀಠದಿಂದ 'ಗಾನ ಕೋಗಿಲೆ; ಮಹಾಲಿಂಗಪೂರದ ಬಿ.ಎಂ.ಪಾಟೀಲ ಪ್ರತಿಷ್ಠಾನದಿಂದ 'ಹಳಕಟ್ಟಿ ಶ್ರೀ', ಹುಬ್ಬಳ್ಳಿಯ 'ಅವ್ವ ಮತ್ತು ಚಿತ್ರದುರ್ಗ ಮುರುಘಾ ಮಠ ಕೊಡಮಾಡುವ 'ಅಕ್ಕ ನಾಗಮ್ಮ ಪ್ರಶಸ್ತಿಗಳು ಅವರಿಗೆ ಸಂದಿವೆ. ಕನರ್ಾಟಕ ವಿದ್ಯಾವರ್ಧಕ ಸಂಘ ಧಾರವಾಡ ಡಾ.ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರವನ್ನು ಪ್ರತಿಷ್ಠಾಪಿಸಲಾಗಿದೆ.